ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಂಡಜ್ಜಿಯ ಅಪರಾಧಿಗೆ ಜೀವಾವಧಿ ಶಿಕ್ಷೆ...!

ದಾವಣಗೆರೆ: ಯುವತಿ ಪ್ರೀತಿಸಿ ಓಡಿಸಿಕೊಂಡು ಹೋಗಿ ವಿವಾಹವಾಗಿದ್ದ ವ್ಯಕ್ತಿ ಹತ್ಯೆ ಮಾಡಿದ್ದ ಅಪರಾಧಿಗಳಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ಕೋರ್ಟ್ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ತಂಗಿಯನ್ನ ಪ್ರೀತಿಸಿ ಮನೆಯಿಂದ ಓಡಿಸಿಕೊಂಡು ಹೋಗಿ ಮದುವೆಯಾಗಿದ್ದ ವ್ಯಕ್ತಿಯನ್ನ ಕೊಲೆ ಮಾಡಿದ್ದ ವ್ಯಕ್ತಿಗೆ ದಾವಣಗೆರೆಯ 1ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡಿ ವಿಧಿಸಿದೆ‌.

ಜಿಲ್ಲೆಯ ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದ ತಿಮ್ಮೇಶ್ ಎಂಬಾತನೇ ಜೀವಾವಧಿ ಶಿಕ್ಷೆಗೊಳಗಾದ ಆರೋಪಿ. ಇನ್ನು ಈತನಿಗೆ ಸಹಕರಿಸಿದ್ದ ತಾಯಿ ದುರುಗಮ್ಮ ಹಾಗೂ ಭವಾನಿ ಎನ್ನುವವರಿಗೂ ನ್ಯಾಯಾಲಯ 12 ತಿಂಗಳು ಜೈಲು ಶಿಕ್ಷೆ ಹಾಗೂ ದಂಡವನ್ನ ವಿಧಿಸಿದೆ.

ಕಳೆದ 2019 ರ ಜನವರಿಯಲ್ಲಿ ಹಾಲೇಶ್ ಎಂಬಾತನನ್ನ ತಿಮ್ಮೇಶ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಹಾಲೇಶ್ ಎಂಬಾತ ತಿಮ್ಮೇಶ್ ನ ತಂಗಿ ಭಾರತಿಯನ್ನ ಪ್ರೀತಿಸಿದ್ದು, ಇಬ್ಬರು ಮನೆ ಬಿಟ್ಟು ಓಡಿ ಹೋಗಿ ಗುಪ್ತವಾಗಿ ಮದುವೆಯಾಗಿದ್ದರು. ಬಳಿಕ ಊರಿಗೆ ಬಂದಿದ್ದು, ಈ ವೇಳೆ ಸಿಟ್ಟಿಗೆದ್ದಿದ್ದ ತಿಮ್ಮೇಶ್ ಹಾಲೇಶ್ ನ ಮನೆ ಮುಂದೆಯೇ ಜಗಳ ತೆಗೆದು ಆತನ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದ. ಬಳಿಕ ಚಿಕಿತ್ಸೆ ಫಲಿಸದೇ ಹಾಲೇಶ್ ಸಾವನ್ನಪ್ಪಿದ್ದ. ಈ ಬಗ್ಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿ ಹಾಗೂ ಅವರ ಸಂಬಂಧಿಕರಿಗೆ ಕೋರ್ಟ್ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಇನ್ನು, ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಕೆ.ಕೆಂಚಪ್ಪ ವಾದವನ್ನ ಮಂಡಿಸಿದ್ದರು.

Edited By : Nirmala Aralikatti
PublicNext

PublicNext

29/09/2021 03:01 pm

Cinque Terre

47.41 K

Cinque Terre

0

ಸಂಬಂಧಿತ ಸುದ್ದಿ