ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಣ್ಣೆ ಏಟಿನಲ್ಲಿ 14 ಕಾರುಗಳ ಗ್ಲಾಸ್ ಪುಡಿ ಪುಡಿ: ಬೆಂಗ್ಳೂರಿನಲ್ಲಿ ಐವರು ಎಂಜಿನಿಯರಿಂಗ್​ ವಿದ್ಯಾರ್ಥಿಗಳ ಬಂಧನ

ಬೆಂಗಳೂರು: ಕುಡಿದ ನಶೆಯಲ್ಲಿ ರಾತ್ರಿ ಮನೆಗಳ‌ ಮುಂದೆ ನಿಲ್ಲಿಸಿದ್ದ 14 ಕಾರುಗಳ ಗಾಜು ಒಡೆದು ಹುಚ್ಚಾಟ ಮೆರೆದಿದ್ದ ಐವರು ಎಂಜಿನಿಯರಿಂಗ್​​ ವಿದ್ಯಾರ್ಥಿಗಳನ್ನು ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಐವರು ಕೂಡ ಉತ್ತರ ಭಾರತ ಮೂಲದ ವಿದ್ಯಾರ್ಥಿಗಳು. ಕಂಠಪೂರ್ತಿ ಕುಡಿದು ಕಾರುಗಳ ಗ್ಲಾಸ್​ಗಳನ್ನು ಆರೋಪಿಗಳು ಪುಡಿ ಪುಡಿ ಮಾಡಿದ್ದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಆರ್​ಆರ್​ ನಗರ ಠಾಣಾ ಪೊಲೀಸರು ಇದೀಗ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಐವರು ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್ ಓದುತ್ತಿದ್ದರು. ಕೆಲವೇ ದಿನಗಳ ಹಿಂದೆ ಆರ್‌ಆರ್ ನಗರದ ಕಾಲೇಜು ಹಾಸ್ಟೆಲ್​ನಿಂದ ಮೂರು ಜನ ಕೆಂಗೇರಿಗೆ ತೆರಳಿದ್ದರು. ಕೆಂಗೇರಿಯಲ್ಲಿ ಇನ್ನಿಬ್ಬರು ಆರೋಪಿಗಳು ವಾಸವಿದ್ರು. ರಾಜರಾಜೇಶ್ವರಿ ನಗರದ ಕೃಷ್ಣಾ ಗಾರ್ಡನ್​​ನ ಅಪಾರ್ಟ್​ಮೆಂಟ್​ವೊಂದರಲ್ಲಿ ವಾಸವಾಗಿದ್ದ ಸ್ನೇಹಿತನ ಬರ್ತ್​ಡೇ ಹಿನ್ನೆಲೆಯಲ್ಲಿ ಪಾರ್ಟಿ ಮಾಡಲು ತೆರಳಿದ್ದರು. ರಾತ್ರಿ 2 ಗಂಟೆ‌ ವೇಳೆ‌ಗೆ ಪಾರ್ಟಿ ಮುಗಿಸಿ ಬರುವಾಗ ಮದ್ಯದ ನಶೆಯಲ್ಲಿ ಬ್ಯಾಟ್​ನಿಂದ ಮನೆ‌ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜು ಒಡೆದಿದ್ದರು. ರಾಜರಾಜೇಶ್ವರಿ ನಗರ ಹಾಗೂ‌ ಕೆಂಗೇರಿ ಪೊಲೀಸ್​ ಠಾಣೆ ವ್ಯಾಪ್ತಿ ಸೇರಿದಂತೆ 14 ಕಾರುಗಳ ಗಾಜು ಜಖಂ ಮಾಡಿದ್ದರು.‌

ಈ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಬಂಧಿತರಲ್ಲಿ ಮೂವರು ಸ್ಥಳೀಯ ಅಪಾರ್ಟ್​​ಮೆಂಟ್ ಹಾಗೂ ಮತ್ತಿಬ್ಬರು ಹಾಸ್ಟೆಲ್​ನಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.

Edited By : Vijay Kumar
PublicNext

PublicNext

26/09/2021 03:52 pm

Cinque Terre

89.16 K

Cinque Terre

9

ಸಂಬಂಧಿತ ಸುದ್ದಿ