ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆ ಅನ್ನಪೂರ್ಣೇಶ್ವರಿ ನಗರದಲ್ಲಿ ಉದ್ಯಮಿಯೊಬ್ಬ ತನ್ನ ಪತ್ನಿಯನ್ನು ಕೊಲೆಗೈದಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಆರೋಪಿ ಫೈನಾಶ್ಸಿಯರ್ ಕಾಂತರಾಜ್, ಪತ್ನಿ ರೂಪಾ ಹತ್ಯೆಗಾಗಿ ರೂಪಿಸಿದ ಸಂಚುಗಳು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಪತ್ನಿಯ ಕೊಲೆಗೆ ಪ್ಲಾನ್ ಮಾಡಲು ದಾರಿ ತೋರಿದ್ದು ಕನ್ನಡದ ಸೂಪರ್ ಹಿಟ್ ಸಿನಿಮಾಗಳಾದ 'ಬಾ ನಲ್ಲೆ ಮಧುಚಂದ್ರಕೆ' ಹಾಗೂ 'ಯುಗಪುರುಷ' ದೃಶ್ಯಗಳು ಎನ್ನಲಾಗಿದೆ. ಈ ಸಿನಿಮಾದ ಒಂದು ಸೀನ್ ಪತ್ನಿ ಹತ್ಯೆಗೆ ಸ್ಕೆಚ್ ಹಾಕಲು ಕಾರಣವಾಗಿತ್ತು ಎನ್ನಲಾಗಿದೆ.
ಕಾಂತರಾಜ್ ಪತ್ನಿಯ ಕೊಲೆಗೆ 15 ದಿನದ ಹಿಂದೆಯೇ ಪತಿ ಪ್ಲಾನ್ ರೂಪಿಸಿದ್ದ. 6 ಜನ ಸ್ನೇಹಿತರೊಂದಿಗೆ ಟ್ರಿಪ್ಗೆ ಪ್ಲಾನ್ ಮಾಡಿ ಮುಹೂರ್ತ ಇಟ್ಟಿದ್ದ. ಅದರಂತೆ ಟ್ರಿಪ್ಗೆ ಹೋಗೋಣ ಎಂದು ಪತ್ನಿಯನ್ನು ಜೋಗಕ್ಕೆ ಕರೆದೊಯ್ದಿದ್ದ. ಜಲಪಾತ ತೋರಿಸುವ ನೆಪದಲ್ಲಿ ಎತ್ತರಕ್ಕೆ ಕರೆದೊಯ್ದು ತಳ್ಳಿ ಕೊಲೆ ಮಾಡಲು ಸ್ಕೇಚ್ ಹಾಕಿದ್ದ ಎನ್ನಲಾಗಿದೆ. ಈ ವೇಳೆ ಎತ್ತರದ ಸ್ಥಳದಲ್ಲಿ ತಲೆ ತಿರುಗುತ್ತದೆ ಎಂದು ಪತ್ನಿ ಹೇಳಿ, ಎತ್ತರದ ಪ್ರದೇಶಕ್ಕೆ ಹೋಗಲೇ ಇಲ್ವಂತೆ. ಹೀಗೆ ಮೂರು ದಿನ ಕೊಲೆ ಮಾಡೋಕೆ ಟ್ರೈ ಮಾಡಿದ್ದರೂ ಪ್ಲಾನ್ ಸಕ್ಸಸ್ ಆಗಿರಲಿಲ್ಲ. ಬಳಿಕ ಮತ್ತೊಂದು ಪ್ಲಾನ್ಗೆ ಪ್ರೇರಣೆಯಾಗಿದ್ದು 'ಯುಗಪುರುಷ' ಸಿನಿಮಾವಂತೆ.
ಆ ಸಿನಿಮಾದಲ್ಲಿ ಪತಿಯನ್ನು ಕಾರಿನಲ್ಲಿ ಗುದ್ದಿ ಕೊಲೆ ಮಾಡಿದ ರೀತಿಯೇ ಸ್ಕೆಚ್ ಹಾಕಿದ್ದ ಚಾಲಾಕಿ ಪತಿರಾಯ. ಜೊತೆಯಲ್ಲಿ ಜನ ಇದ್ದಿದ್ದರಿಂದ ಅದು ಕೂಡ ಸಾಧ್ಯವಾಗಿರಲಿಲ್ಲ ಅಂತಾ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ. ಈ ಹಿನ್ನಲೆ ಕೋಪದಿಂದ ಮನೆಗೆ ಬಂದಿದ್ದ ಪತಿ ಕಾಂತರಾಜ್, ಮನೆಯಲ್ಲಿ ಕೊಲೆ ಮಾಡಲು ಸಂಚು ರೂಪಿಸಿದ್ದನಂತೆ.
ಮನೆಯಲ್ಲಿ ನೇಣು ಹಾಕಿ ಕೊಂಡಿರುವಂತೆ ಬಿಂಬಿಸಲು ಪ್ಲಾನ್ ಮಾಡಿದ್ದ. ಅದು ಕೂಡ ಫ್ಲಾಪ್ ಆದ ಹಿನ್ನೆಲೆಯಲ್ಲಿ ಹೆಂಡತಿಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಪೊಲೀಸರು ಮನೆಗೆ ಭೇಟಿಕೊಟ್ಟ ವೇಳೆ ಕೊಲೆ ನಂತರ ಮನೆಯ ಬಾಗಿಲು ಹಾಕಿಕೊಂಡು ಎಸ್ಕೇಪ್ ಆಗಿದ್ದ. ವಿಚಾರಣೆ ವೇಳೆ ಇವಿಷ್ಟು ಮಾಹಿತಿಯನ್ನ ಆರೋಪಿ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ.
PublicNext
25/09/2021 04:09 pm