ಲಕ್ನೋ: ದೇಶದ ಅತೀ ದೊಡ್ಡ ಮತಾಂತರ ಜಾಲವನ್ನು ಬೇಧಿಸಿರುವುದಾಗಿ ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಬುಧವಾರ (ಸೆಪ್ಟೆಂಬರ್ 22) ತಿಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೀರತ್ ನಲ್ಲಿ ಇಸ್ಲಾಮಿಕ್ ವಿದ್ವಾಂಸ ಮೌಲಾನಾ ಕಲೀಂ ಸಿದ್ದಿಖಿ(64)ಯನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಉತ್ತರಪ್ರದೇಶದ ಭಯೋತ್ಪಾದಕ ನಿಗ್ರಹ ದಳದ ಹೇಳಿಕೆ ಪ್ರಕಾರ, ಧಾರ್ಮಿಕ ಮತಾಂತರಕ್ಕೆ ನೆರವು ನೀಡುತ್ತಿರುವ ಆರೋಪದ ಮೇಲೆ ಸಿದ್ದಿಖಿಯನ್ನು ಬಂಧಿಸಲಾಗಿದೆ. ಉಮರ್ ಗೌತಮ್ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದಾಗ ಸಿದ್ದಿಖಿ ಹೆಸರು ಬಯಲಾಗಿತ್ತು. ಮತಾಂತರ ದಂಧೆಯಲ್ಲಿ ತೊಡಗಿದ್ದ ಉಮರ್ ಗೌತಮ್ ನನ್ನು ಉತ್ತರಪ್ರದೇಶ ಪೊಲೀಸರು ಜೂನ್ ನಲ್ಲಿ ಬಂಧಿಸಿದ್ದು, ಈಗ ಜೈಲಿನಲ್ಲಿದ್ದಿರುವುದಾಗಿ ವರದಿ ಹೇಳಿದೆ.
ವರ್ಷದ ಮೌಲಾನಾ ಸಿದ್ದಿಖಿಯ ಸಂಶಯಾಸ್ಪದ ಚಟುವಟಿಕೆ ಮೇಲೆ ಭದ್ರತಾ ಏಜೆನ್ಸಿ ತೀವ್ರ ನಿಗಾ ಇರಿಸಿತ್ತು. ಮಂಗಳವಾರ ರಾತ್ರಿ ಸಿದ್ದಿಖಿ ಮೀರತ್ ಗೆ ಆಗಮಿಸಿದ್ದ ವೇಳೆ ವಶಕ್ಕೆ ಪಡೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
PublicNext
23/09/2021 12:41 am