ಜಾರ್ಖಂಡ್: ರಾತ್ರಿ ತನಗೆ ಊಟ ಬಡಿಸಲು ತಡಮಾಡಿದಳು ಎಂದು ಪಾಪಿ ಪತಿಯೋರ್ವ ತನ್ನ ಮಡದಿಯನ್ನು ಕೊಂದ ಘಟನೆ ಜಾರ್ಖಂಡ್ ನ ಕುಂತಿ ಜಿಲ್ಲೆಯ ಕಲಾಮತಿ ಹಳ್ಳಿಯಲ್ಲಿ ನಡೆದಿದೆ. 70 ವರ್ಷ ಈ ಪಾಪಿ ಗಂಡ ತನ್ನ ಪತ್ನಿಯ ಮೇಲೆ ಹಲ್ಲೆ ಮಾಡಿ, ಕೊನೆಗೆ ಕೊಲೆ ಮಾಡಿದ್ದಾನೆ.
ಮನೆಯಲ್ಲಿಯೇ ಇದ್ದ ಈತ ರಾತ್ರಿ ಅಡುಗೆ ಮಾಡುವಂತೆ ಪತ್ನಿಗೆ ಹೇಳಿದ್ದಾನೆ. ಪತ್ನಿ ಅಡುಗೆಯನ್ನೇನೋ ಬೇಗ ಮಾಡಿದ್ದಳು. ಆದರೆ ಪತಿಗೆ ಬಡಿಸಲು ಸ್ವಲ್ಪ ವಿಳಂಬವಾಗಿದೆ. ಅಷ್ಟಕ್ಕೇ ಸಿಟ್ಟಾದ ಪತಿ ಮಹಾಶಯ ಹೆಂಡತಿಗೆ ಮೇಲೆ ಹಲ್ಲೆ ಮಾಡಿದ್ದಾನೆ ಈ ಪತ್ನಿ ಕುಸಿದು ಬಿದ್ದಿದ್ದಾಳೆ.
ಕೆಳಗೆ ಬಿದ್ದ ಪತಿ ತನಗೆ ಏನು ಮಾಡದಂತೆ ಪರಿಪರಿಯಾಗಿ ಕೇಳಿಕೊಂಡರು ಕರುಣೆ ತೋರದ ಕ್ರೂರಿ ಹಲ್ಲೆ ಮುಂದುವರೆಸಿದ್ದಾನೆ. ನಂತರ ರಕ್ತದ ಮಡುವಿನಲ್ಲಿ ಪತ್ನಿ ಒದ್ದಾಡುತ್ತಿದ್ದರೂ ಆಸ್ಪತ್ರೆಗೆ ಸಾಗಿಸದೇ ಆಕೆಯ ಉಸಿರು ನಿಲ್ಲಿಸಿದ್ದಾನೆ. ಇಡೀ ರಾತ್ರಿ ಹೆಂಡತಿ ಮೃತದೇಹದ ಜತೆ ಇದ್ದಾನೆ. ಮಾರನೆಯ ದಿನ ಪೊಲೀಸರಿಗೆ ವಿಷಯ ತಿಳಿದು ಗಂಡನನ್ನು ಬಂಧಿಸಿದ್ದಾರೆ.
PublicNext
21/09/2021 11:40 am