ಕಲಬುರಗಿ: ಮದುವೆಯಾಗಲು ನಿರಾಕರಿಸಿದ ಪ್ರಿಯಕರನಿಗೆ ಪ್ರೇಯಸಿ ಗೂಸಾ ಕೊಟ್ಟ ಘಟನೆ ಕಲಬುರಗಿ ಗ್ರಾಮಾಂತರ ಠಾಣೆ ಮುಂದೆ ನಡೆದಿದೆ.
ಬೆಂಗಳೂರಿನಿಂದ ಪ್ರಿಯಕರ ಇರ್ಫಾನ್‌ನನ್ನ ಹುಡುಕಿಕೊಂಡು ಬಂದು ಪ್ರೇಯಸಿ ರಹೀನಾ ಗೂಸಾ ನೀಡಿದ್ದಾಳೆ. ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಪರಸ್ಪರ 5 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಯುವತಿಗೆ ಅಕ್ರಮ ಸಂಬಂಧ ಇದೆ ಅಂತ ಇರ್ಫಾನ್, ರಹೀನಾ ಬಾನುವನ್ನು ಬೆಂಗಳೂರಿನಲ್ಲೇ ಬಿಟ್ಟು ಊರಿಗೆ ಬಂದಿದ್ದ.
ಇರ್ಫಾನ್ ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದ ನಿವಾಸಿಯಾಗಿದ್ದಾನೆ. ಇರ್ಫಾನ್ಗಾಗಿ ಬೆಂಗಳೂರಿಂದ ಬಂದಿದ್ದ ರಹೀನಾ ಬಾನು, ಮದುವೆ ಮಾಡಿಕೊಳ್ಳುವಂತೆ ಪಟ್ಟುಹಿಡಿದಿದ್ದಳು. ಮದುವೆ ಮಾಡಿಕೊಳ್ಳಲು ಹಿಂದೇಟು ಹಾಕಿದ ಹಿನ್ನೆಲೆ ಪೊಲೀಸ್ ಠಾಣೆ ಮುಂದೆಯೇ ಪ್ರಿಯಕರನಿಗೆ ಹೊಡೆದಿದ್ದಾಳೆ.
PublicNext
19/09/2021 11:22 pm