ಬೆಂಗಳೂರು: ಕಾರ್ ಪಾರ್ಕಿಂಗ್ ವಿಚಾರವಾಗಿ ಮಾತಿಗೆ ಮಾತು ಬೆಳೆದು ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಹಟ್ಟಿ ಗಣಿ ಅಧ್ಯಕ್ಷ, ಮಾಜಿ ಶಾಸಕ ಮಾನಪ್ಪ ವಜ್ಜಲ್ ಪುತ್ರ ಆಂಜನೇಯ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಹಲ್ಲೆಗೊಳಗಾದ ಉದ್ಯಮಿ ದೀಪಕ್ ರೈ ಪುತ್ರ ವಿಕ್ರಮ್ ಈ ಬಗ್ಗೆ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಸುಮಾರು10 ರಿಂದ 15 ಹುಡುಗರನ್ನು ಕರೆಯಿಸಿ ತಮ್ಮ ಮೇಲೆ ಪಂಚ್ ಮಾಡುವ ಆಯುಧಗಳಿಂದ ಹಲ್ಲೆ ನಡೆಸಲಾಗಿದೆ. ಹುಬ್ಬು ಹಾಗೂ ಮುಖದ ಮೇಲೇ ರಕ್ತ ಬರುವಂತೆ ತಮ್ಮ ಮೇಲೆ ಹಲ್ಲೆ ಮಾಡಲಾಗಿದೆ ಎಂದು ವಿಕ್ರಮ್ ಆರೋಪಿಸಿದ್ದಾರೆ.
ಸೆಪ್ಟೆಂಬರ್ 12ರ ರಾತ್ರಿ ಹತ್ತು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಸ್ನೇಹಿತನನ್ನು ಡ್ರಾಪ್ ಮಾಡಲು ವಿಕ್ರಮ್, ವಸಂತನಗರದ ಮಾನಪ್ಪ ವಜ್ಜಲ್‌ರ ಎಂಬೆಸಿ ಅಪಾರ್ಟ್‌ಮೆಂಟ್‌ಗೆ ಬಂದಿದ್ದಾನೆ. ಇದೇ ವೇಳೆ ಅಲ್ಲಿದ್ದ ಆಂಜನೇಯ ಹಾಗೂ ವಿಕ್ರಮ್ ನಡುವೆ ಪಾರ್ಕಿಂಗ್ ವಿಚಾರಕ್ಕೆ ಜಗಳವಾಗಿದೆ. ನಂತರ ಹುಡುಗರನ್ನು ಕರೆಯಿಸಿದ ಆಂಜನೇಯ ವಜ್ಜಲ್ ವಿಕ್ರಮ ಮೇಲೆ ಹಲ್ಲೆ ಮಾಡಿಸಿದ್ದಾನೆ ಎನ್ನಲಾಗಿದೆ.
ವಿಕ್ರಮ್ ನೀಡಿದ ದೂರಿನ ಪ್ರತಿಯಾಗಿ ಮಾನಪ್ಪ ವಜ್ಜಲ್ ಪುತ್ರ ಆಂಜನೇಯ ಪ್ರತಿದೂರು ನೀಡಿದ್ದಾರೆ.
PublicNext
17/09/2021 03:38 pm