ಮಡಿಕೇರಿ: ಚಿಕ್ಕಪ್ಪನೋರ್ವ ತನ್ನೊಂದಿಗೆ ಅನೈತಿಕ ಸಂಬಂಧ ಬಿಟ್ಟ ಮಗಳನ್ನು ಕೊಂದು ತಾನೂ ನೇಣಿಗೆ ಶರಣಾದ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಚೆಂಬು ಗ್ರಾಮ ಪಂಚಾಯ್ತಿ ರಾಮನಹಳ್ಳಿಯಲ್ಲಿ ನಡೆದಿದೆ.
ಚೆಂಬು ಗ್ರಾಮ ಪಂಚಾಯ್ತಿ ಸದಸ್ಯೆ ಕಮಲಾ ಕೊಲೆಯಾದ ಮಹಿಳೆ, ಮುತ್ತು (52) ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ಆರೋಪಿ. ವರಸೆಯಿಂದ ಕಮಲಾಗೆ ಮುತ್ತು ಚಿಕ್ಕಪ್ಪನಾಗಬೇಕು. ಆದರೆ ಇಬ್ಬರೂ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ.
ಕಮಲಾ ಬುಧವಾರ ಸಂಜೆ 7 ಗಂಟೆಗೆ ತನ್ನ 9 ವರ್ಷದ ಮಗಳನ್ನು ಕರೆದುಕೊಂಡು ರಾಮನಹಳ್ಳಿಯ ಹೊಳೆಯಿಂದ ಆಚೆಗೆ ಇರುವ ಸಂಬಂಧಿಕರ ಮನೆಗೆ ಹೋಗೋದಕ್ಕೆ ಸೇತುವೆಯನ್ನು ದಾಟಿದ್ದಾಳೆ. ಹೊಳೆಯ ಮತ್ತೊಂದು ದಂಡೆಯಲ್ಲೇ ಇರುವ ಮನೆಯಿಂದ ಬಂದ ಮುತ್ತು, 'ನೀನು ಇಲ್ಲಿ ಬರಲೇಬಾರದು. ನಿನ್ನನ್ನು ಸುಮ್ಮನೇ ಬಿಡುವುದಿಲ್ಲ' ಎಂದು ಕಮಲಾಳ ಕೈ ಹಿಡಿದು ಎಳೆದಾಡಿ ಹೊಳೆಗೆ ನೂಕಿದ್ದಾನೆ. ಆಕೆಯೊಂದಿಗೆ ಇದ್ದ ಕುಟುಂಬಸ್ಥರಿಗೂ ಮುತ್ತು ಕೊಲೆ ಬೆದರಿಕೆ ಹಾಕಿ, ಅಲ್ಲಿಂದ ಜೊತೆಯಲ್ಲಿ ಇರುವವರನ್ನು ಕಳುಹಿಸಿದ್ದಾನೆ.
ಸೇತುವೆಗೆ ಬಿದ್ದ ಕಮಲಳನ್ನು ಎಳೆದುಕೊಂಡು ಹೋಗಿ, ಕತ್ತಿ ತೋರಿಸಿ ಬೆಟ್ಟದ ತುದಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ನಂತರ ಬೆಳಗ್ಗೆ ಗ್ರಾಮಸ್ಥರಿಗೆ ಈ ವಿಚಾರ ಗೊತ್ತಾಗುತ್ತದೆ ಎಂಬ ಭಯದಿಂದ ಆಕೆಯನ್ನು ಬೆಟ್ಟದ ಮೇಲೆ ಹತ್ಯೆ ಮಾಡಿ ನೇಣು ಹಾಕಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.
PublicNext
16/09/2021 10:04 pm