ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

KSRTC ಬಸ್​ನಲ್ಲಿ ಬೆಂಗ್ಳೂರಿಗೆ ಬರುತ್ತಿದ್ದ ಯುವತಿಗೆ ಕಿಸ್ ಕೊಟ್ಟ ಕಾಮುಕ.!

ಬೆಂಗಳೂರು: ಬಳ್ಳಾರಿಯಿಂದ ಬೆಂಗಳೂರಿಗೆ ಕೆಎಸ್ಆರ್​​ಟಿಸಿ ಬಸ್​ನಲ್ಲಿ ಬರುತ್ತಿದ್ದ ಯುವತಿಗೆ ಕಾಮುಕನೋರ್ವ ಮುತ್ತಿಟ್ಟ ಘಟನೆ ನಡೆದಿದೆ.

ಯುವತಿ ಗಣೇಶ ಹಬ್ಬ ಮುಗಿಸಿಕೊಂಡು ಬಳ್ಳಾರಿಯಿಂದ ರಾತ್ರಿ 10:40ಕ್ಕೆ ಬಸ್ ಹತ್ತಿದ್ದಳು. 19ರಿಂದ 25 ವರ್ಷದ ಯುವಕನೋರ್ವ ಅದೇ ಬಸ್ ಹತ್ತಿದ್ದ. ಬಸ್​​ನಲ್ಲಿ ಯುವತಿ ನಿದ್ದೆಗೆ ಜಾರಿದ್ದಾಳೆ. ಬೆಂಗಳೂರಿನತ್ತ ಬರ್ತಿದ್ದ ಬಸ್ ಪೀಣ್ಯಾ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ಕಾಮುಕ ಮಲಗಿದ್ದ ಯುವತಿಗೆ ಕಿಸ್ ಕೊಟ್ಟು ಪರಾರಿಯಾಗಿದ್ದಾನೆ.

ಘಟನೆಯಿಂದ ಬೆಚ್ಚಿಬಿದ್ದ ಯುವತಿ ಬಸ್​ನಿಂದ ಇಳಿದು ನೇರವಾಗಿ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಆರೋಪಿಯ ವಿರುದ್ಧ ಪೀಣ್ಯಾ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಪೊಲೀಸರು ಆರೋಪಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.

Edited By : Vijay Kumar
PublicNext

PublicNext

16/09/2021 08:22 pm

Cinque Terre

119.09 K

Cinque Terre

10