ಮುಂಬೈ: ಪಕ್ಕದ ಮನೆಯ 5 ವರ್ಷದ ಬಾಲಕಿಗೆ ಲೈಗಿಂಕ ಕಿರುಕುಳ ನೀಡುತ್ತದ್ದ ಎನ್ನುವ ಆರೋಪದ ಮೇಲೆ 42 ವರ್ಷದ ವ್ಯಕ್ತಿಯನ್ನು ಮುಂಬೈಯ ಪೂರ್ವ ಹೊರವಲಯದ ಜೋಗೇಶ್ವರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೋಗೇಶ್ವದ ಕಸಮ್ ನಗರದಲ್ಲಿ ವಾಸಿಸುತ್ತಿದ್ದ ಆರೋಪಿಯನ್ನು ಇಂದು ಬೆಳಗ್ಗೆ ಬಂಧಿಸಲಾಗಿದೆ ಎಂದು ಅಂಬೊಲಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಸೋಮೇಶ್ವರ್ ಕಾಮ್ಟೆ ಹೇಳಿದ್ದಾರೆ.
ಕಳೆದ ವಾರ ಆರೋಪಿ ತನ್ನ ಗುಡಿಸಿಲಿಗೆ ಆಟವಾಡಲು ಬಂದ ಬಾಲಕಿಯ ಬಟ್ಟೆ ತೆಗೆದು ಕಿರುಕುಳ ನೀಡಿರುವುದಾಗಿ ಸಂತ್ರಸ್ತ ಬಾಲಕಿಯ ತಾಯಿ ಬುಧವಾರ ದಾಖಲಿಸಿರುವ ದೂರಿನಲ್ಲಿ ಆರೋಪಿಸಿರುವುದಾಗಿ ಕಾಮ್ಟೆ ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 354 (ಲೈಂಗಿಕ ಕಿರುಕುಳ) ಮತ್ತು ಪೋಕ್ಸೋ ಕಾಯ್ದೆಯಡಿ ಎಫ್ ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
PublicNext
16/09/2021 05:19 pm