ವಿಜಯವಾಡ(ಆಂಧ್ರ ಪ್ರದೇಶ): ಆ ದಂಪತಿ ಚಂದನೆಯ ಡಬ್ ಸ್ಮ್ಯಾಶ್ ವಿಡಿಯೋಗಳನ್ನು ಮಾಡಿ ಅದನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದರು. ಅಲ್ಲದೇ ದೊಡ್ಡ ಮಂದಿಯೊಂದಿಗೆ ಫೋಟೋ ತೆಗೆಯಿಸಿಕೊಂಡು ಅಪ್ಲೋಡ್ ಮಾಡ್ತಿದ್ದರು. ಈ ಬ್ಯೂಟಿಫುಲ್ ದಂಪತಿಯನ್ನು ನೋಡಿದ ಆತ ಅವರ ಕೈಗೆ ಹಣ ಕೊಟ್ಟಿದ್ದಾನೆ. ಹಣ ಸ್ವೀಕರಿಸಿದ ದಂಪತಿ ಈಗ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಏನಿದು ಪ್ರಕರಣ?
ಆಂಧ್ರ ಪ್ರದೇಶದ ಈಸ್ಟ್ ಗೋದಾವರಿ ಜಿಲ್ಲೆಯ ಗೊಕವರಂ ನಿವಾಸಿಗಳಾದ ಮಾಮಿದಲ ಶ್ರೀಧರ್ ಮತ್ತು ಛೆರುಕುಮಿಲಿ ಗಾಯತ್ರಿ ಎಂಬ ದಂಪತಿ ಮೇಲೆ ಮೋಸದ ಆರೋಪ ಕೇಳಿಬಂದಿದೆ. ನಿಮ್ಮ ಮಗಳನ್ನು ವಿದೇಶಕ್ಕೆ ಕಳಿಸೋದಾಗಿ ನಂಬಿಸಿ ಇವರು ಗೌರಿಶಂಕರ್ ಎಂಬುವವರಿಂದ ಬರೋಬ್ಬರಿ 44 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾರೆ ಎನ್ನಲಾಗಿದೆ.
ದಿನಗಳೆದಂತೆ ಮಗಳನ್ನು ವಿದೇಶಕ್ಕೆ ಕಳುಹಿಸದಿದ್ದಾಗ ಗೌರಿಶಂಕರ್ ಅನುಮಾನಗೊಂಡು ಕೊಟ್ಟ ಹಣ ವಾಪಸ್ ಕೊಡುವಂತೆ ದಂಪತಿ ಬಳಿ ಹೋಗಿ ಕೇಳಿದ್ದಾರೆ. ಇದಾದ ಕೆಲ ದಿನಗಳಲ್ಲಿ ದಂಪತಿ ಫೋನ್ ಸ್ವಿಚ್ ಆಫ್ ಆಗಿದೆ. ಹೀಗಾಗಿ ಇವರಿಬ್ಬರ ವಿರುದ್ಧ ಗೊಕವರಂ ಠಾಣೆಯಲ್ಲಿ ಮೋಸ ಹೋದ ಗೌರಿಶಂಕರ್ ಕಂಪ್ಲೇಂಟ್ ಕೊಟ್ಟಿದ್ದಾರೆ.
ದೂರಿನನ್ವಯ ಪೊಲೀಸರು ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರು ಇದಕ್ಕೂ ಮುನ್ನ ಇಂತಹ ಮೋಸದ ಕೃತ್ಯಗಳಲ್ಲಿ ಭಾಗಿಯಾಗಿದ್ದರು ಎಂಬ ಒಂದೊಂದೇ ಮಾಹಿತಿ ಹೊರಬೀಳುತ್ತಿವೆ.
PublicNext
15/09/2021 05:29 pm