ಚಿಕ್ಕಬಳ್ಳಾಪುರ: ನನ್ನ ಪತ್ನಿಯ ಜೊತೆಗಿನ ಅಕ್ರಮ ಬಿಟ್ಟು ಎಂದು ಎಚ್ಚರಿಕೆ ನೀಡಿದ ವ್ಯಕ್ತಿಯನ್ನು ಆಟೋ ಡ್ರೈವರ್ ಕೊಲೆ ಮಾಡಿದ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.
ಚಿಂತಾಮಣಿ ನಗರದ ಆಗ್ರಹಾರ ನಿವಾಸಿ ಸೈಯದ್ ಮುಸ್ತಾಕ್ (35) ಕೊಲೆಯಾದ ವ್ಯಕ್ತಿ. ಆಟೋ ಚಾಲಕ ನವೀದ್ ಕೊಲೆಗೈದ ಆರೋಪಿ. ಚಿಂತಾಮಣಿ ನಗರದ ಆಜಾದ್ ಚೌಕ್‍ನಲ್ಲಿ ಸೆ.13ರ ರಾತ್ರಿ 8.30 ಗಂಟೆ ಸುಮಾರಿಗೆ ಕೊಲೆ ನಡೆದಿತ್ತು.
ಮುಸ್ತಾಕ್ ಪತ್ನಿ ಜೊತೆ ನವೀದ್ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ಬಗ್ಗೆ ಸ್ಥಳೀಯರು ಮುಸ್ತಾಕ್‌ಗೆ ಕುಹಕ ಮಾಡುತ್ತಿದ್ದರಂತೆ. ಇದರಿಂದ ಕೆರಳಿದ ಮುಸ್ತಾಕ್, ನವೀದ್‌ಗೆ ಕರೆ ಮಾಡಿ ಮಾತಾಡಬೇಕು ಬಾ ಅಂತ ಕರೆಸಿಕೊಂಡಿದ್ದ ಎನ್ನಲಾಗಿದೆ. ಅದರಂತೆ ಆಜಾದ್ ಚೌಕ್‍ನಲ್ಲಿ ಇಬ್ಬರೂ ಸೇರಿದ್ದರು. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದ್ದು ಕೋಪಗೊಂಡ ನವೀದ್ ತನ್ನ ಬಳಿಯಿದ್ದ ಚಾಕುವಿನಿಂದ ಮುಸ್ತಾಕ್ ಎದೆ ಹಾಗೂ ಹೊಟ್ಟೆಗೆ ಇರಿದು ಕೊಲೆಗೈದು ಪರಾರಿಯಾಗಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ನವೀದ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬೆಳಕಿಗೆ ಬಂದಿದೆ.
PublicNext
14/09/2021 07:22 pm