ಹುಣಸೂರು: ಚಿಕ್ಕಮ್ಮ ಮಗನೊಂದಿಗೆ ಸರಸವಾಡುತ್ತಿರುವ ಹೇಯ ಘಟನೆವೊಂದು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿ ಮರಳಯ್ಯನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಶಿವರುದ್ರೇಗೌಡರ ಪುತ್ರ ಕುಮಾರ(28) ಮತ್ತು ಶಿವರುದ್ರೇಗೌಡರ ಸಹೋದರ ಬೀರೇಗೌಡರ ಪತ್ನಿ ಶೀಲಾ(35) ಮೃತ ದುರ್ದೈವಿಗಳು. ಸಂಬಂಧದಲ್ಲಿ ತಾಯಿ-ಮಗ ನಂತಿರಬೇಕಿದ್ದ ಇವರಿಬ್ಬರೂ ಅಕ್ರಮ ಸಂಬಂಧ ಮನೆಯವರಿಗೆ ಗೊತ್ತಾದ ಬಳಿಕ ನಡೆದದ್ದು ದುರಂತ.
ಮನೆಯವರಿಗೆ ಗೊತ್ತಾದ ವಿಷಯ ಎಲ್ಲಿ ಊರಿನವರಿಗೆಲ್ಲ ಗೊತ್ತಾಗುತ್ತೋ ಎಂದು ಹೆದರಿದ ಕಾಮಾಂದ ಈ ಜೋಡಿ ಸೆ.9ರಂದು ಉದ್ದೂರು ನಾಲಾ ವ್ಯಾಪ್ತಿಯ ಹೊನ್ನೇಗೌಡನ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.
ಇವರಿಬ್ಬರೂ ಕೆರೆಗೆ ಹಾರುತ್ತಿರುವ ದೃಶ್ಯ ಪಕ್ಕದ ತೋಟದ ಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶುಕ್ರವಾರ ಕುಮಾರನ ಮೃತದೇಹ ಸಿಕ್ಕಿದ್ದು, ಶನಿವಾರ ಬೆಳಗಿನ ಜಾವ ಶೀಲಾಳ ಶವ ಪತ್ತೆಯಾಗಿದೆ. ಅವರಿಬ್ಬರ ನಡುವೆ ಅಕ್ರಮ ಸಂಬಂಧ ಇತ್ತು. ಈ ವಿಷ್ಯ ಎಲ್ಲರಿಗೂ ಗೊತ್ತಾದರೆ ಮರ್ಯಾದೆ ಹೋಗುತ್ತೆ ಇಬ್ಬರೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮೃತ ಯುವಕನ ತಂದೆ ಶಿವರುದ್ರೇಗೌಡ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
12/09/2021 05:04 pm