ಭೂಪಾಲ್ : ಗುಂಡಿನ ಮತ್ತೆ ಗಮ್ಮತ್ತು ಅಳತೆ ಮೀರಿದರೆ ಆಪತ್ತು ಎನ್ನುವುದಕ್ಕೆ ಈ ಯುವತೊಇ ಸಾಕ್ಷಿಯಾಗಿದ್ದಾಳೆ. ಅದೇನೊ ಗೊತ್ತಿಲ್ಲ ಸ್ವಾಮಿ ಎಣ್ಣೆ ಒಳಹೊಕ್ಕರೆ ತಾವೇನು ಮಾಡುತ್ತಿದ್ದೇವೆ ಎನ್ನುವ ಅರಿವು ಕುಡುಕರಿಗೆ ಇರುವುದಿಲ್ಲ. ಮದ್ಯದ ಅಮಲಿನಲ್ಲಿ ತೇಲುವ ಅವರು ತಾವು ಮಾಡಿದ್ದೇ ಸರಿ ಎನ್ನುತ್ತಾರೆ.
ಸದ್ಯ ದೆಹಲಿ ಮೂಲದ 22 ವರ್ಷದ ಮಾಡೆಲ್ ಎಣ್ಣೆ ಏಟಿನಲ್ಲಿ ದೊಡ್ಡ ರಾದ್ದಾಂತ ಮಾಡಿಕೊಂಡಿದ್ದಾಳೆ. ಕಂಠಪೂರ್ತಿ ಮದ್ಯ ಸೇವಿಸಿ ರಸ್ತೆಗೆ ಇಳಿದ ಈಕೆ, ಆರ್ಮಿ ಜೀಪ್ ಅಡ್ಡಗಟ್ಟಿ ಅವಾಜ್ ಹಾಕಿದ್ದಾಳೆ. ನಶೆಯಲ್ಲಿ ಜೀಪ್ ನ ಬಂಪರ್ ಗೆ ಒದ್ದಿದ್ದಾಳೆ. ಈ ವೇಳೆ ಆಕೆಯ ಬ್ಯಾಗ್ ಲ್ಲಿದ್ದ ಸರಾಯಿ ಬಾಟಲ್ ಕೆಳಗೆ ಬಿದ್ದಿದೆ. ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ.
ಸೇನೆಯ ವಾಹನಕ್ಕೆ ದಾರಿ ಬಿಡದೆ ಜಗಳ ಮಾಡಿದ್ದಾಳೆ. ನಶೆಯಲ್ಲಿ ವಾಹನಕ್ಕೆ ಒದ್ದಿದ್ದಾಳೆ. ದಾರಿ ಬಿಡುವಂತೆ ಕೇಳಲು ಬಂದ ಯೋಧನನ್ನೇ ದಬ್ಬಿ ದರ್ಪ ಮೆರೆದಿದ್ದಾಳೆ. ಘಟನೆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಾಡೆಲ್ ದುರ್ವತನೆಗೆ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿದೆ.
PublicNext
10/09/2021 01:31 pm