ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡ್ರಗ್ಸ್ ಕೇಸ್: ಮಾಜಿ ಸಚಿವ ಯೋಗೇಶ್ವರ್ ಪತ್ನಿಯ ಸಹೋದರ ಪೊಲೀಸ್ ವಶಕ್ಕೆ

ಬೆಂಗಳೂರು: ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರ ಪತ್ನಿಯ ಸಹೋದರ ರತನ್‌ಲಾಲ್ ಹೆಸರು ಡ್ರಗ್ಸ್ ಕೇಸ್‌ನಲ್ಲಿ ಕೇಳಿ ಬಂದಿದೆ. ಪೊಲೀಸರಿಗೆ ಮಾಹಿತಿದಾರನಾಗಿ ಕೆಲಸ ಮಾಡುತ್ತಲೇ ಡ್ರಗ್ಸ್ ಮಾರಾಟ ಮಾಡಿದ್ದಾನೆ ಎಂಬ ಆರೋಪದ ಮೇಲೆ ರತನ್‌ಲಾಲ್‌ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವಿಚಾರಣೆ ವೇಳೆ ಈತನಿಂದ ಹಲವು ಮಾಹಿತಿಗಳು ದೊರೆತಿವೆ ಎನ್ನಲಾಗಿದೆ.

ರಾಜಸ್ಥಾನ ಮೂಲದ ರತನ್‌ಲಾಲ್‌ನನ್ನು ನಾಲ್ಕು ದಿನಗಳ ಹಿಂದೆಯೇ ಪೊಲೀಸರು ಬಂಧಿಸಿದ್ದರು. ಈಗ ವಿಚಾರಣೆಗಾಗಿ 5 ದಿನಗಳ ಕಾಲ ವಶಕ್ಕೆ ಪಡೆದಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆತನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ರತನ್‌ಲಾಲ್‌ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಅವರ ಪತ್ನಿಯ ಸಹೋದರನಾಗಿದ್ದರೂ, ಈ ಪ್ರಕರಣಕ್ಕೂ ಮಾಜಿ ಸಚಿವರಿಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸ್‌ ಮೂಲಗಳು ಸ್ಪಷ್ಟಪಡಿಸಿವೆ.

Edited By : Nagaraj Tulugeri
PublicNext

PublicNext

05/09/2021 08:23 am

Cinque Terre

67.93 K

Cinque Terre

1

ಸಂಬಂಧಿತ ಸುದ್ದಿ