ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ರೌಡಿಗಳು ಹಾಗೂ ಪುಂಡರ ಪುಂಡಾಟ ಹೆಚ್ಚಾಗಿದೆ. ಸದ್ಯ ನಗರದ ರಿಚ್ಮಂಡ್ ಟೌನ್ನಲ್ಲಿ ಅಪರಿಚಿತನೋರ್ವ ಹಾಡಹಗಲೇ ಚಾಕು ತೋರಿಸಿ ಸುಲಿಗೆಗೆ ಪ್ರಯತ್ನಿಸಿದ ಘಟನೆ ನಡೆದಿದೆ.
ಯುವಕನೋರ್ವ ಕ್ಯಾಬ್ ಒಂದಕ್ಕೆ ನುಗ್ಗಿ ಚಾಲಕನಿಗೆ ಚಾಕು ತೋರಿಸಿ ಸುಲಿಗೆ ಮಾಡಲು ಯತ್ನಿಸಿದ್ದಾನೆ. ಇದರಿಂದಾಗಿ ಚಾಲಕ ಕಿರುಚಾಡಿದ್ದಾನೆ. ಇದೇ ವೇಳೆ ಯುವಕನು ಡ್ರೈವರ್ಗೆ ಚಾಕುವಿನಿಂದ ಇರಿಯಲು ಯತ್ನಿಸಿದ್ದಾನೆ. ಈ ವೇಳೆ ಹತ್ತಿರದಲ್ಲೇ ಇದ್ದ ಸ್ಥಳೀಯರು ದರೋಡೆಕೋರನನ್ನು ಹಿಡಿದು ಥಳಿಸಿದ್ದಾರೆ. ಆದರೆ ಹಿಡಿಯಲು ಯತ್ನಿಸಿದ ಸ್ಥಳೀಯರಿಗೂ ಯುವಕ ಚಾಕು ತೋರಿಸಿ ಧಮ್ಕಿ ಹಾಕಿ ನಡುರಸ್ತೆಯಲ್ಲೇ ಅಡ್ಡಾದಿಡ್ಡಿ ಓಡಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.
ಈ ಸಂಬಂಧ ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
PublicNext
01/09/2021 07:44 pm