ಬೆಂಗಳೂರು: ಪೆಟ್ರೋಲ್ ಹಾಕಿಸಿಕೊಂಡ ನಂತರ ಹಣ ಕೇಳಿದ್ದಕ್ಕೆ ಆ ಯುವಕ ಬಂಕ್ ಮ್ಯಾನ್ ಗೆ ಚಾಕು ತೋರಿಸಿದ್ದಾನೆ. ಈ ಘಟನೆ ನಾಯಂಡನಹಳ್ಳಿ ಇಂಡಿಯನ್ ಬಂಕ್ ನಲ್ಲಿ ನಡೆದಿದೆ.
ಆಗಸ್ಟ್ 25 ರ ತಡರಾತ್ರಿ 1 ಗಂಟೆಗೆ ಈ ಘಟನೆ ನಡೆದಿದೆ. ಆಕ್ಟಿವಾ ಬೈಕ್ ನಲ್ಲಿ ಬಂದ ವರ್ಷಿತ್ ಹಾಗೂ ಜೀವನ್ ಎಂಬ ಯುವಕರು 200 ರೂ. ಪೆಟ್ರೋಲ್ ಹಾಕಿಸಿದ್ದಾರೆ. ನಂತರ ಹಣ ಕೇಳಿದಾಗ ಬಂಕ್ ಸಿಬ್ಬಂದಿಗೆ ಚಾಕು ತೋರಿಸಿದ್ದಲ್ಲದೇ ಹಲ್ಲೆಗೆ ಯತ್ನಿಸಿದ್ದಾರೆ. ಈ ದೃಶ್ಯ ಸಿಸಿಟವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಂದ್ರಾ ಲೇಔಟ್ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
PublicNext
31/08/2021 01:37 pm