ಬೆಂಗಳೂರು: ಯುವಕನೋರ್ವ ಎರಡು ವರ್ಷಗಳಿಂದ ಪ್ರೀತಿಸಿದ್ದ ವಿವಾಹಿತ ಮಹಿಳೆಯನ್ನು ಕೊಲೆಗೈದ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಂಧ್ರ ಪ್ರದೇಶ ಮೂಲದ ಅನಿತಾ (23) ಕೊಲೆಯಾದ ಮಹಿಳೆ. ವೆಂಕಟೇಶ್ (27) ಹತ್ಯೆಗೈದ ಆರೋಪಿ. ಬಾಲ್ಯದಲ್ಲೇ ಮದುವೆ ಆಗಿ ಗಂಡನನ್ನ ಬಿಟ್ಟು ಬಂದಿದ್ದ ಅನಿತಾ ಮೆಡಿಸಿನ್ ಸಪ್ಲೈ ಏಜೆನ್ಸಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಇಲ್ಲಿಯೇ ವೆಂಕಟೇಶ್ ಜೊತೆಗೆ ಸ್ನೇಹ ಬೆಳೆದಿದ್ದು, ಸ್ನೇಹ ಸಂಬಂಧಕ್ಕೆ ತಿರುಗಿದೆ. ಇಬ್ಬರೂ ಎರಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಇತ್ತೀಚೆಗೆ ವೆಂಕಟೇಶ್ನಿಂದ ದೂರವಾಗಲು ಅನಿತಾ ಮುಂದಾಗಿದ್ದಳು. ನಾನು ಮದುವೆ ಆಗಿದ್ದೀನಿ ನನ್ನ ಬಿಟ್ಟುಬಿಡು ಎಂದು ಕೇಳಿಕೊಂಡಿದ್ದಳು. ಈ ವಿಚಾರವಾಗಿ ಇಬ್ಬರ ಮಧ್ಯೆ ಜಗಳವಾಗಿ ಇದರಿಂದ ಕೋಪಗೊಂಡ ವೆಂಕಟೇಶ್ ಅನಿತಾಳನ್ನ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಬೆಳಗ್ಗೆ ಕೊಲೆ ಮಾಡಿ ಅನಿತಾಳ ದೇಹವನ್ನು ವೆಂಕಟೇಶ್ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಈ ವೇಳೆ ಕಟ್ಟಡದಿಂದ ಬಿದ್ದಿದ್ದಾಳೆ ಎಂದು ಡ್ರಾಮಾ ಮಾಡಿದ್ದನಂತೆ. ಸ್ಥಳೀಯರು ಆತನನ್ನು ಕೂಡಿಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಠಾಣೆಗೆ ತಂದು ವಿಚಾರಿಸಿದಾಗ ಕೊಲೆಯ ಅಸಲಿ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ.
PublicNext
30/08/2021 05:10 pm