ಬೆಂಗಳೂರು: ಡ್ರಗ್ಸ್ ಕೇಸ್ ಆರೋಪಿ ನಟಿ ಸೋನಿಯಾ ಅಗರ್‌ವಾಲ್‌ರನ್ನು ಪೊಲೀಸರು ಆಕೆಯನ್ನು ಅರೆಸ್ಟ್ ಮಾಡಿದ್ದಾರೆ. ನಗರದ ಐಟಿಸಿ ಗಾರ್ಡೇನಿಯಾ ಹೋಟೆಲ್ ನಲ್ಲಿ ನಟಿ ಸೋನಿಯಾ ತಂಗಿದ್ದಾರೆಂದು ಮಾಹಿತಿ ಇತ್ತು. ಆಕೆಯ ಕೋಣೆಗೆ ಪೊಲೀಸರು ದಾಳಿ ಮಾಡಿದಾಗ ನಟಿ ಸೋನಿಯಾ ವಾಶ್ ರೂಮ್‌ನಲ್ಲಿ ಅಡಗಿ ಕೂತಿದ್ದರು ಎಂಬ ಮಾಹಿತಿ ಇದೆ.
ಇಂದು ಬೆಳ್ಳಂಬೆಳಗ್ಗೆ ಸೋನಿಯಾ ಮನೆಯ ಮೇಲೆ ದಾಳಿ ನಡೆಸಿದ ಪೂರ್ವ ವಲಯದ ಪೊಲೀಸರು 40 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿದ್ದರು. ಡಿಜೆ ಹಳ್ಳಿ ಇನ್ಸ್‍ಪೆಕ್ಟರ್ ನೇತೃತ್ವದಲ್ಲಿ ಈ ದಾಳಿ ನಡೆದಿತ್ತು. ದಾಳಿಯ ಸಮಯದಲ್ಲಿ ಸೋನಿಯಾ ಅಗರ್ವಾಲ್ ಮನೆಯಲ್ಲಿ ಇರಲಿಲ್ಲ. ಭಾನವಾರ ರಾತ್ರಿ ಪಾರ್ಟಿಗೆ ಹೋಗಿದ್ದ ಆಕೆ ಮನೆಗೆ ಬಂದಿರಲಿಲ್ಲ. ದಾಳಿ ನಡೆದ ಹಿನ್ನೆಲೆಯಲ್ಲಿ ಪೊಲೀಸರು ಆಕೆಗೆ ಕರೆ ಮಾಡಿದ್ದರು. ಈ ವೇಳೆ ಆಕೆ ಕರೆಯನ್ನು ಸ್ವೀಕರಿಸಿರಲಿಲ್ಲ.
PublicNext
30/08/2021 02:30 pm