ವಿಜಯಪುರ: ವ್ಯಕ್ತಿಯೋರ್ವ ಕ್ಷುಲ್ಲಕ ಕಾರಣಕ್ಕಾಗಿ ಪತ್ನಿಯನ್ನು ಕೊಲೆಗೈದು ಶವವನ್ನು ತೋಟದ ಮನೆಯ ಜಮೀನಿನಲ್ಲಿ ಹೂತಿಟ್ಟ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದಲ್ಲಿ ನಡೆದಿದೆ.
ತಡಲಗಿ ಗ್ರಾಮದ ದ್ರಾಕ್ಷಾಯಣಿ ಬನ್ನಿಗೋಳಮಠ(36) ಹತ್ಯೆಯಾಗಿರುವ ಪತ್ನಿ. ಮಕ್ಕಳನ್ನು ದೂರ ಮಾಡಿದ್ದಾಳೆ ಎನ್ನುವ ಕಾರಣಕ್ಕೆ ರಾಚಯ್ಯ ತನ್ನ ಪತ್ನಿ ದ್ರಾಕ್ಷಾಯಣಿಯನ್ನು ಕೊಲೆಗೈದು ಶವವನ್ನು ಮನೆಯ ಪಕ್ಕ ಜಮೀನಿನಲ್ಲಿ ಹೂತಿಟ್ಟು ಪರಾರಿಯಾಗಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕೊಲ್ಹಾರ ಠಾಣೆ ಪೊಲೀಸರು ಆರೋಪಿ ರಾಚಯ್ಯನನ್ನು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.
PublicNext
29/08/2021 09:50 am