ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು ಅತ್ಯಾಚಾರ ಕೇಸ್: ಈ ಹಿಂದೆ ಪ್ರಿಯತಮೆಯ ತಂದೆಯನ್ನೇ ಕೊಲೆ ಮಾಡಿದ್ದ ಆರೋಪಿ

ಮೈಸೂರು: ಇಡೀ ರಾಜ್ಯದ ಅಮಾಯಕ ಮಹಿಳೆಯರನ್ನು ಬೆಚ್ಚಿ ಬೀಳುವಂತೆ ಮಾಡಿದ್ದ ಮೈಸೂರು ನಗರದಲ್ಲಿನ ಗ್ಯಾಂಗ್ ರೇಪ್ ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಒಂದೊಂದೇ ಸಂಗತಿ ತಿಳಿಯುತ್ತಿವೆ. ಬಂಧಿತ ಆರೋಪಿಗಳಲ್ಲಿ ಓರ್ವ ಕೊಲೆಪಾತಕಿಯೂ ಇದ್ದಾನೆ.

ಸಾಮೂಹಿಕ ಅತ್ಯಾಚಾರದ ಪ್ರಕರಣದ​ ಆರೋಪಿಗಳಿಗೆ ಕ್ರಿಮಿನಲ್ ಹಿನ್ನೆಲೆ ಇರುವುದು ಕೂಡ ಬೆಳಕಿಗೆ ಬಂದಿದೆ. ಪ್ರಕರಣದ ಆರೋಪಿಯೊಬ್ಬ ಕೊಲೆ ಕೇಸ್​ ಆರೋಪಿಯಾಗಿದ್ದ ಎಂಬ ವಿಚಾರ ತನಿಖೆಯಿಂದ ಈಗ ಹೊರಬಿದ್ದಿದೆ. ಪ್ರೀತಿಸಿದ ಹುಡುಗಿಯನ್ನು ಮದುವೆ ಮಾಡಿಕೊಡದ ಹಿನ್ನೆಲೆಯಲ್ಲಿ ಹುಡುಗಿ ತಂದೆಯನ್ನೇ ಆತ ಕೊಲೆ ಮಾಡಿದ್ದ. ತಮಿಳುನಾಡಿನ ತಿರ್ಪೂರ್​ ಜಿಲ್ಲೆಯಲ್ಲಿ ಈ ಕೊಲೆಯಾಗಿತ್ತು. ಬಳಿಕ, ತಿರ್ಪೂರ್​​ನಲ್ಲಿ ಕೊಲೆ ಪ್ರಕರಣದಲ್ಲಿ ಶಿಕ್ಷೆ ಕೂಡ ಅನುಭವಿಸಿದ್ದ. ಉಳಿದ ಆರೋಪಿಗಳ ಹಿಸ್ಟರಿ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

Edited By : Nagaraj Tulugeri
PublicNext

PublicNext

28/08/2021 06:10 pm

Cinque Terre

136.8 K

Cinque Terre

16

ಸಂಬಂಧಿತ ಸುದ್ದಿ