ನವದೆಹಲಿ: ಮನೆಗೆ ಹೊರಟಿದ್ದ 65 ವರ್ಷದ ವೃದ್ಧನೋರ್ವನ ಮೇಲೆ ಯುವಕರಿಬ್ಬರು ಹಲ್ಲೆ ಮಾಡಿ, ದರೋಡೆ ಮಾಡಿದ ಘಟನೆ ವಾಯುವ್ಯ ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ನಡೆದಿದೆ.
ರಾಮ್ ನಿವಾಸ್ ಹಲ್ಲೆಗೆ ಒಳಗಾದ ವೃದ್ಧ. ಯುವಕರ ಕೃತ್ಯದ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಗಸ್ಟ್ 26ರಂದು ಮುಂಜಾನೆ 3.30ರ ಸುಮಾರಿಗೆ ರಾಮ್ ನಿವಾಸ್ ಮನೆಗೆ ಮರಳುತ್ತಿದ್ದರು. ಇನ್ನೇನು ಗೇಟ್ ತೆಗೆದು ಮನೆಯೊಳಗೆ ಹೋಗುವ ಹೊತ್ತಿಗೆ ಹಿಂದಿನಿಂದ ಬಂದ ಇಬ್ಬರು ಯುವಕರು ವೃದ್ಧನ ಬಳಿ ಇದ್ದ ಬ್ಯಾಗ್‌ಅನ್ನು ಕಿತ್ತುಕೊಂಡಿದ್ದಾರೆ. ರಾಮ್ ನಿವಾಸ್ ಎಷ್ಟೇ ಪ್ರಯತ್ನಿಸಿದರೂ ಆರೋಪಿಗಳು ಬ್ಯಾಗ್ ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.
ಪೊಲೀಸ್ ಚೆಕ್ ಪೋಸ್ಟ್ ನಿಂದ ಕೇವಲ 200 ಮೀಟರ್ ದೂರದಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.
PublicNext
27/08/2021 03:40 pm