ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹರಕೆ ತೀರಿಸಲು ದೇವಸ್ಥಾನಕ್ಕೆ ತೆರಳಿದ್ದ 8 ಸ್ನೇಹಿತರಲ್ಲಿ ಮೂವರು ನೀರುಪಾಲು

ಮಂಡ್ಯ: ದೇವಸ್ಥಾನಕ್ಕೆ ಹರಕೆ ತೀರಿಸಲು ಹೊರಟ 8 ಜನ ಸ್ನೇಹಿತರಲ್ಲಿ ಮೂವರು ನೀರುಪಾಲದ ದುರ್ಘಟನೆ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಚಂದಗೋಳಮ್ಮ ದೇವಾಲಯದ ಬಳಿಯ ಕಾಲುವೆಯಲ್ಲಿ ನಡೆದಿದೆ.

ಮೈಸೂರಿನ ಬೆಲವತ್ತಮಂಟಿ ನಗರದ ಆಟೋ ಚಾಲಕ ರವಿ(27), ಗಾರೆ ಕೆಲಸಗಾರ ಕುಂಬಾರಕೊಪ್ಪಲು ನಗರದ ಯೋಗಶ್(24) ಹಾಗೂ ಲೋಕನಾಯಕನಗರದ ಮಂಜು(24) ನೀರು ಪಾಲಾದ ದುರ್ದೈವಿಗಳು.

ಚಂದಗೋಳಮ್ಮ ದೇವಾಲಯಕ್ಕೆ ಬಂದಿದ್ದ ಮೈಸೂರು ಮೂಲದ 8 ಜನ ಸ್ನೇಹಿತರು ಹರಕೆ ಪೂಜೆ ಸಲ್ಲಿಸಿ ಪ್ರಸಾದ ಸೇವನೆ ಬಳಿಕ ನಿನ್ನೆ ಸಂಜೆ ಈಜಲು ಕಾಲುವೆಗೆ ಇಳಿದಿದ್ದರು. ಈ ವೇಳೆ ರವಿ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಕಾಪಾಡಲು ಯೋಗೇಶ್ ಮುಂದಾಗಿದ್ದರು. ಇಬ್ಬರು ದಡ ಸೇರದ ಹಿನ್ನೆಲೆ ಮಂಜು ಹಾಗೂ ಸೀನು ಎಂಬುವರು ನೀರಿಗಿಳಿದಿದ್ದರು. ಈ ನಡುವೆ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗುವುದನ್ನು ಗಮನಿಸಿ ಇತರೇ ಸ್ನೇಹಿತರು ಬೆಲ್ಟ್ ಸಹಾಯದಿಂದ ಓರ್ವನನ್ನು ರಕ್ಷಣೆ ಮಾಡಿದ್ದಾರೆ.

ಮೂವರು ನೀರಿನಲ್ಲಿ ಮುಳುಗುತ್ತಿದ್ದವರನ್ನು ಗಮನಿಸಿ ಸ್ಥಳೀಯರು ರಕ್ಷಣೆ ಮಾಡಲು ಮುಂದಾದರು ಕೂಡ ಪಾರು ಮಾಡಲು ಸಾಧ್ಯವಾಗಿಲ್ಲ. ಬಳಿಕ ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕದಳದ ಅಧಿಕಾರಿ ಶಿವಣ್ಣ ಅವರ ನೇತೃತ್ವದ ತಂಡ ಶೋಧಕಾರ್ಯ ನಡೆಸಿದ್ದಾರೆ. ನಿನ್ನೆ ಸಂಜೆ ನೀರಿನ ಹರಿವು ಜೋರಾಗಿದ್ದರಿಂದ ಮೃತ ದೇಹಗಳು ಪತ್ತೆ ಆಗಿರಲಿಲ್ಲ, ಬಳಿಕ ರಾತ್ರಿಯಾದ್ದರಿಂದಾಗಿ ಶೋಧಕಾರ್ಯವನ್ನು ಮೊಟಕುಗೊಳಿಸಲಾಗಿತ್ತು. ಇಂದು ಬೆಳಗ್ಗೆ ಪತ್ತೆಗೆ ನಡೆದ ಶೋಧ ಕಾರ್ಯದ ವೇಳೆ ಮೂವರ ಮೃತ ದೇಹಗಳು ಪತ್ತೆಯಾಗಿದೆ.

Edited By : Vijay Kumar
PublicNext

PublicNext

25/08/2021 10:43 am

Cinque Terre

51.35 K

Cinque Terre

1

ಸಂಬಂಧಿತ ಸುದ್ದಿ