ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗ್ಯಾಸ್ ಬಲೂನ್ ಸಿಲಿಂಡರ್ ಸ್ಫೋಟಗೊಂಡು ನಾಲ್ವರ ಸಾವು- 10 ಮಂದಿಗೆ ಗಾಯ

ಲಕ್ನೋ/ ಭೋಪಾಲ್: ಬಲೂನಿಗೆ ಗಾಳಿ ತುಂಬಿಸುವ ಗ್ಯಾಸ್ ಸಿಲಿಂಡರ್ ಸ್ಫೋಟವಾದ ಎರಡು ಪ್ರತ್ಯೇಕ ಘಟನೆಗಳು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಭಾನುವಾರ ನಡೆದಿದೆ. ಗ್ಯಾಸ್ ಬಲೂನ್ ಸಿಲಿಂಡರ್ ಸ್ಫೋಟಗೊಂಡು ಬಲೂನ್ ಮಾರಾಟಗಾರ ಸೇರಿದಂತೆ ನಾಲ್ವರು ಮೃತಪಟ್ಟಿದ್ದು, 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಘಟನೆಯು ಮಧ್ಯಪ್ರದೇಶದ ಚಿಂದ್ವಾರಾ ಮತ್ತು ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದಿದೆ. ಚಿಂದ್ವಾರಾ ಮಾರುಕಟ್ಟೆಯಲ್ಲಿ ತಾಜುದ್ದೀನ್ ಅನ್ಸಾರಿ ನಿಜಾಮುದ್ದೀನ್ ಅನ್ಸಾರಿ(40) ಮತ್ತು ಶೇಖ್ ಇಸ್ಮಾಯಿಲ್(70) ಮೃತಪಟ್ಟಿದ್ದರೆ, ವಾರಾಣಾಸಿಯ ರಾಮನಗರ ಪ್ರದೇಶದಲ್ಲಿ ಮೃತಪಟ್ಟವರನ್ನು ಗೀತಾ ದೇವಿ(40) ಮತ್ತು ಲಲ್ಲಾ(30) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿಂದ್ವಾರ ಪ್ರಕರಣದಲ್ಲಿ ಸ್ಫೋಟದ ಶಬ್ಧ ಸುಮಾರು ದೂರದವರೆಗೆ ಕೇಳಿಸಿದ್ದು, ಕಂಪನದ ಅನುಭವವಾಗಿದೆ ಎನ್ನಲಾಗಿದೆ. ಬಲೂನ್ ಮಾರಾಟಗಾರ ಬಲೂನುಗಳಲ್ಲಿ ಗ್ಯಾಸ್ ತುಂಬುತ್ತಿದ್ದಾಗ ಈ ಭಯಾನಕ ಘಟನೆ ನಡೆದಿದೆ. ಸ್ಫೋಟದ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದರು ಆದರೆ ಅವರು ಇನ್ನೂ ಅಧಿಕೃತ ಹೇಳಿಕೆ ನೀಡಲಿಲ್ಲ.

Edited By : Vijay Kumar
PublicNext

PublicNext

23/08/2021 09:23 am

Cinque Terre

48.6 K

Cinque Terre

0

ಸಂಬಂಧಿತ ಸುದ್ದಿ