ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಸ್ಟ್ ರೂ.2,500 ಗಾಗಿ ತಂದೆಯನ್ನ ಕೊಂದ ಪಾಪಿ ಮಗ

ರಾಂಚಿ: ತಂದೆ ಮಕ್ಕಳ ಜಗಳವಾಡುವುದನ್ನು ನಾವು ನೀವೆಲ್ಲಾ ಅಲ್ಲಲ್ಲಿ ಕಂಡಿದ್ದೇವೆ ಆದ್ರೆ ಇಲ್ಲೊಬ್ಬ ಪಾಪಿ ಮಗ ತಂದೆಯ ಉಸಿರನ್ನೇ ನಿಲ್ಲಿಸಿದ್ದಾನೆ. ಅದು ಒಂದು ಕ್ಷುಲಕ ಕಾರಣಕ್ಕೆ.

ಹೌದು ಕೇವಲ ಎರಡೂವರೆ ಸಾವಿರ ರೂಪಾಯಿಗಾಗಿ ತಂದೆಯನ್ನ ಪುತ್ರನೇ ಕೊಲೆ ಮಾಡಿರುವ ಘಟನೆ ಜಾರ್ಖಂಡ್ ರಾಜ್ಯದ ಸದರ್ ಪೊಲೀಸ್ ಠಾಣಾ ವ್ಯಾಪ್ತಿಯ ಗಿಂಡ್ರಾ ಗ್ರಾಮದಲ್ಲಿ ನಡೆದಿದೆ.

ಮಹದೇವ್ ಉರಾಂವ್ ತಂದೆಯನ್ನ ಕೊಂದ ಮಗ. ಗುರುವಾರ ಬೆಳಗಿನ ಜಾವ ಮಲಗಿದ್ದ ತಂದೆಯನ್ನು ಕೊಂದ ಮಹದೇವ್ ಎಸ್ಕೇಪ್ ಆಗಿದ್ದನು. ಆದ್ರೆ ಗ್ರಾಮಸ್ಥರು ಆರೋಪಿಯನ್ನು ಪತ್ತೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕೆಲ ದಿನಗಳ ಹಿಂದೆ ಮಹದೇವ್ ತಂದೆ ಜಮೀನಿನ ಒಂದು ಚಿಕ್ಕ ಭಾಗವನ್ನು ಮಾರಿದ್ದರು. ಈ ಮಾರಾಟದಿಂದ 5,200 ರೂಪಾಯಿ ಸಿಕ್ಕಿತ್ತು. ತಂದೆ-ಮಗ ಇಬ್ಬರೂ 2,500 ರೂ. ಹಂಚಿಕೊಂಡಿದ್ದರು.

ಆದ್ರೆ ತಮದೆ ಹತ್ರ ಇದ್ದ ಆ 2,500 ರೂ.ಗಾಗಿ ಮಗ ಮರುದಿನ ಬೆಳಗ್ಗೆ 4 ಗಂಟೆಗೆ ತಂದೆಯನ್ನ ಕೊಂದು ಹಣ ಎತ್ಕೊಂಡು ಪರಾರಿಯಾಗಿದ್ದನು. ಕೊಲೆ ನಡೆದ ಹಿಂದಿನ ರಾತ್ರಿ ಅಪ್ಪ-ಮಗನ ನಡುವೆ ಹಣದ ವಿಚಾರವಾಗಿ ಜಗಳ ನಡೆದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Edited By : Nirmala Aralikatti
PublicNext

PublicNext

21/08/2021 08:52 am

Cinque Terre

60 K

Cinque Terre

2