ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ದಾಗಿನಕಟ್ಟೆ ಗ್ರಾಮಕ್ಕೆ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ವಸೂಲಿಗೆ ಬ್ಯಾಂಕ್ ಅಧಿಕಾರಿಗಳು ಬಂದ ಘಟನೆ ನಡೆದಿದೆ. 5 ಕೋಟಿ ರೂಪಾಯಿ ಸಾಲ ವಸೂಲಿಗೆ ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಬಂದಿದ್ದು, ಈ ವೇಳೆ ಪರಿಶೀಲನೆ ನಡೆಸಿ ಹೋಗಿದ್ದಾರೆ.
ದಾಗಿನಕಟ್ಟೆ ವಿಧವೆಯರಾದ ಗೀತಮ್ಮ, ಸಾವಿತ್ರಮ್ಮ ಮನೆಗೆ ಬಂದಿದ್ದ ಅಧಿಕಾರಿಗಳು, ಗೀತಮ್ಮ ರೂ. 2.4 ಕೋಟಿ, ಸಾವಿತ್ರಮ್ಮ ಹೆಸರಲ್ಲಿ ರೂ.2 ಕೋಟಿ ಸಾಲ ಪಡೆಯಲಾಗಿದೆ. 2013-14ನೇ ಸಾಲಿನಲ್ಲಿ ಇಬ್ಬರ ಮಹಿಳೆಯರ ಹೆಸರಿನಲ್ಲಿ ಸಾಲ ಮಾಡಲಾಗಿದ್ದು, ಆದ್ರೆ ನಾವು ಸಾಲ ತೆಗೆದುಕೊಂಡಿಲ್ಲ, ಸಾಲದ ಬಗ್ಗೆ ಗೊತ್ತಿಲ್ಲ ಎಂದು ಮಹಿಳೆಯರು ಹೇಳುತ್ತಿದ್ದಾರೆ. ಇದ್ದಕ್ಕಿದ್ದಂತೆ ಬಂದು ಸಾಲ ಕಟ್ಟಿ ಎಂದು ಅಧಿಕಾರಿಗಳು ಹೇಳುತ್ತಿದ್ದಂತೆಯೇ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಘಟನೆ ಹಿನ್ನೆಲೆ ಏನು...?
ಗೀತಮ್ಮ, ಸಾವಿತ್ರಮ್ಮ ಸಹೋದರಿಯರು. ಇಬ್ಬರ ತವರು ಚನ್ನಗಿರಿ ತಾಲೂಕಿನ ಸೋಮ್ಲಾಪುರ. ಇವರ ತಂದೆಗೆ 4 ಪುತ್ರರು, 4 ಪುತ್ರಿಯರು. ಇಬ್ಬರೂ ಸಹೋದರಿಯರು ದಾಗಿನಕಟ್ಟೆಯ ರಂಗಸ್ವಾಮಿ, ಜಗದೀಶ ಎಂಬ ಸಹೋದರರಿಗೆ ಮದುವೆಯಾಗಿದ್ರು. ರಂಗಸ್ವಾಮಿ, ಜಗದೀಶ ಮೃತರಾಗಿ 16 ವರ್ಷವಾಯ್ತು. ಮನೆತನಕ್ಕೆ 5 ಎಕರೆ ಜಮೀನಿತ್ತು. ಇವರ ಹೆಸರಿನಲ್ಲಿ ಅವರ ತಮ್ಮ ಜಗದೀಶನ ಹೆಂಡತಿ ಶೋಭಾ ಶಿವಮೊಗ್ಗದ ಡಿಸಿಸಿ ಮ್ಯಾನೇಜರ್ ಆಗಿದ್ರು. ಗೀತಮ್ಮ, ಸಾವಿತ್ರಮ್ಮ ಅವರಿಗೆ ವಿಧವಾ ವೇತನಾ ಮಾಡಿಸಿಕೊಡುವುದಾಗಿ ಇಬ್ಬರ ಆಧಾರ್ ಕಾರ್ಡ್ ಜೆರಾಕ್ಸ್ ಪಡೆದಿದ್ದ ಶೋಭಾ, ಇದೇ ಆಧಾರ್ ಕಾರ್ಡ್ ಅಧಾರದಲ್ಲಿ ನಕಲಿ ಚಿನ್ನ ಇಟ್ಟು 4.5 ಕೋಟಿ ಸಾಲ ಪಡೆದಿದ್ರು. ಇವರ ಹೆಸರಲ್ಲಿ ಬ್ಯಾಂಕಿನ ಯಾವುದೇ ನೋಟಿಸ್ ಬಂದ್ರು ತಮಗೆ ಕಳುಹಿಸುವಂತೆ ಶೋಭಾ ಹೇಳಿದ್ರು. ಈ ಘಟನೆ ನಡೆದು 7 ವರ್ಷವಾಯ್ತು. ಇದಕ್ಕೆಲ್ಲಾ ಶೋಭಾ ಅವರೇ ಕಾರಣ ಎನ್ನುವುದು ಸಹೋದರಿಯರ ಆರೋಪ.
PublicNext
20/08/2021 07:24 pm