ಚಿತ್ರದುರ್ಗ : ಲಂಚ ಪಡೆಯುವಾಗ ಹಿರಿಯೂರು ತಾಲ್ಲೂಕಿನ ವಿ.ವಿ.ಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬೆಳಘಟ್ಟ ಗ್ರಾಮದ ರೈತ ಎಚ್.ಮೂರ್ತಿ ತನ್ನ ಮಗ ಎಂ.ಯಲ್ಲಪ್ಪನನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸೇರಿಸಲು ಅರ್ಜಿ ಸಲ್ಲಿಸಿದ್ದನು. ಈ ವೇಳೆ ಮುರಾರ್ಜಿ ಶಾಲೆಯ ಪ್ರಾಂಶುಪಾಲ ಸೈಯದ್ ನಿಜಾಮುದ್ದೀನ್ ನಿನ್ನ ಮಗನದ್ದು ಒಂದು ಅಂಕ ಕಡಿಮೆಯಿದೆ. ಆದ್ದರಿಂದ ಪ್ರವೇಶ ನೀಡಲು ಆಗುವುದಿಲ್ಲ. ಪ್ರವೇಶಾತಿ ಬೇಕಾದಲ್ಲಿ 10 ಸಾವಿರ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ.
ಈ ವೇಳೆ ಎಚ್.ಮೂರ್ತಿ ನಾನು ಬಡವ ನೀವು ಪ್ರವೇಶಾತಿ ನೀಡಿ ಬಳಿಕ ನಾನು ಹಣ ತಂದುಕೊಡುತ್ತೇನೆ ಎಂದು ಹೇಳಿದ್ದಾನೆ. ಇತನ ಮಾತಿನಂತೆ ಪ್ರವೇಶಾತಿ ನೀಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.
ಇದರಿಂದ ಮನನೊಂದ ಮೂರ್ತಿ ಪ್ರಾಂಶುಪಾಲರ ವಿರುದ್ಧ ಚಿತ್ರದುರ್ಗ ಎ.ಸಿ.ಬಿ. ಪೊಲೀಸ್ ಠಾಣೆ ಡಿ.ವೈ.ಎಸ್.ಪಿ. ಬಸವರಾಜ್ ಆರ್.ಮಗದುಮ್ ಅವರಿಗೆ ದೂರು ಸಲ್ಲಿಸಿದ್ದಾನೆ. ಬುಧವಾರ ಬೆಳಗ್ಗೆ ಸೈಯದ್ ನಿಜಾಮುದ್ದೀನ್ ಲಂಚದ ಹಣ ಪಡೆಯುವಾಗ ಎಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಳಿಕ ವಿ.ಪ್ರವೀಣ್‍ಕುಮಾರ್ ತಂಡ ಸೈಯದ್ ನಿಜಾಮುದ್ದೀನ್ ಮನೆಯನ್ನು ಶೋಧನೆ ನಡೆಸಿದೆ. ಡಿವೈಎಸ್ಪಿ ಬಸವರಾಜ ಆರ್.ಮಗದುಮ್, ಪೊಲೀಸ್ ನಿರೀಕ್ಷಕ ಬಸವರಾಜ್ ಟಿ. ಬುದ್ಧಿ, ಸಿಬ್ಬಂದಿಗಳಾದ ಮಾರುತಿರಾಂ, ಓಬಣ್ಣ, ಫಕೃದ್ದೀನ್, ಹರೀಶ್ ಕುಮಾರ್, ಯತಿರಾಜ್, ಫಯಾಜ್, ಯೂನುಸ್, ಪ್ರಭಾಕರ್, ಶ್ರೀಪತಿ ಇವರುಗಳು ಕಾರ್ಯಾಚರಣೆ ಭಾಗವಹಿಸಿದ್ದರು. ಪ್ರಕರಣದ ತನಿಖೆ ಮುಂದುವರೆದಿದೆ.
PublicNext
18/08/2021 04:40 pm