ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

CID ಕಾರ್ಯ ಶ್ಲಾಘನೀಯ : 600 ಕೋಟಿ ರೂ. ಮೌಲ್ಯದ ಆಸ್ತಿ ಕಬಳಿಸಿದ ಭೂಗಳ್ಳರ ಜಾಲ ಭೇದಿಸಿದ ಟೀಮ್

ಬೆಂಗಳೂರು: ಇತ್ತಿಚ್ಚೆಗೆ ನ್ಯಾಯವಾಗಿ ದುಡಿದು ನೆಮ್ಮದಿಯಿಂದ ಬದುಕಬೇಕು ಎನ್ನುವವರಿಗಿಂತಲೂ ಇನ್ನೊಬ್ಬರನ್ನು ಹೊಡೆದು ಮೆರೆಯಬೇಕು ಎನ್ನುವವರೇ ಹೆಚ್ಚಾಗಿದ್ದಾರೆ. ಸದ್ಯ ರಾಜ್ಯ ರಾಜಧಾನಿ ಸುತ್ತಮುತ್ತ ನಿಮ್ಮ ಖಾಲಿ ಜಾಗ ಇದ್ರೆ ಜೋಕೆ ಏಕೆಂದರೆ ವಾರಸುದಾರರು ಸುಳಿಯದ ಖಾಲಿ ಜಾಗಗಳನ್ನು ಗುರುತಿಸಿ ಅವುಗಳನ್ನು ಕಬಳಿಸುವ ಭೂಗಳ್ಳರ ಜಾಲವೊಂದಿದೆ.

ಈಗಾ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಕಬಳಿಸಿರುವ ಭೂಗಳ್ಳರ ಜಾಲವೊಂದನ್ನು ಸಿಐಡಿ ಪೊಲೀಸರು ಭೇದಿಸಿದ್ದಾರೆ.

ಕಂಪನಿಯೊಂದರ ಜಾಗವನ್ನು ಕಬಳಿಸಲು ಯತ್ನಿಸಿದ್ದ ಪ್ರಕರಣವನ್ನು ಭೇದಿಸಿರುವ ಸಿಐಡಿ ಪೊಲೀಸರು, ಭೂಗಳ್ಳರ ಜತೆ ಕೈಜೋಡಿಸಿದ್ದ ನಾಲ್ವರು ವಕೀಲರನ್ನೂ ಬಂಧಿಸಿದ್ದಾರೆ.

ಯಶವಂತಪುರ ಸಮೀಪದ ಷಾ ಹರೀಲಾಲ್ ಭೀಕಾಬಾಯಿ ಕಂಪನಿಯ ಆಸ್ತಿ ಕಬಳಿಕೆಗೆ ಭೂಗಳ್ಳರು ಯತ್ನಿಸಿದ್ದ ಹಿನ್ನೆಲೆಯಲ್ಲಿ ಧನಲಕ್ಷ್ಮೀ ಎಂಬವರು ಕಳೆದ ಡಿಸೆಂಬರ್ ನಲ್ಲಿ ಹಲಸೂರು ಗೇಟ್ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸಿಐಡಿ, ಭೂಗಳ್ಳರ ಜಾಲವನ್ನು ಭೇದಿಸಿದೆ.

ವಕೀಲರು ಮೂಲ ಆಸ್ತಿ ಮಾಲೀಕರ ಹೆಸರನ್ನು ಮುಚ್ಚಿಟ್ಟು ನಕಲಿ ಕಕ್ಷಿದಾರ ಹಾಗೂ ಪ್ರತಿವಾದಿಗಳನ್ನು ಸೃಷ್ಟಿಸುತ್ತಿದ್ದರು. ನಂತರ ನ್ಯಾಯಾಲಯದಲ್ಲಿ ದಾವೆ ಹೂಡಿ ನಕಲಿ ದಾಖಲೆಗಳನ್ನೇ ಅಸಲಿ ಎಂದು ವಾದಿಸಿ, ಈ ಭೂಗಳ್ಳರು ರಾಜಿ ಡಿಕ್ರಿ ಪಡೆದು ಸಂಧಾನದ ಮೂಲಕ ಜಾಗ ಕಬಳಿಸಿದರೂ ಅಸಲಿ ಆಸ್ತಿದಾರರಿಗೆ ವಿಷಯವೇ ಗೊತ್ತಾಗುತ್ತಿರಲಿಲ್ಲ. ಬಳಿಕ ಕೋಟ್ಯಂತರ ರೂಪಾಯಿಗೆ ಬೇರೆಯವರಿಗೆ ಅದೇ ಆಸ್ತಿಯನ್ನ ಮಾರಾಟ ಮಾಡುತ್ತಿದ್ದರು ಎಂಬುದು ಸಿಐಡಿ ಮೂಲಗಳಿಂದ ತಿಳಿದು ಬಂದಿದೆ.

Edited By : Nirmala Aralikatti
PublicNext

PublicNext

06/08/2021 10:18 pm

Cinque Terre

89.54 K

Cinque Terre

4

ಸಂಬಂಧಿತ ಸುದ್ದಿ