ಅಮರಾವತಿ: ಕೇವಲ 100 ರೂಪಾಯಿಗಾಗಿ ಅಣ್ಣನನ್ನೇ ಕೊಂದ ಅಮಾನವೀಯ ಘಟನೆ ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ಅಮರಪುರಂ ಮಂಡಲದಲ್ಲಿರುವ ಹೇಮಾವತಿ ಎಂಬಲ್ಲಿ ನಡೆದಿದೆ.
ರಂಗಣ್ಣ ಎಂಬ ವ್ಯಕ್ತಿ ತನ್ನ ಅಣ್ಣ ಲಕ್ಷ್ಮಣ್ಣನನ್ನು ಹತ್ಯೆ ಮಾಡಿದ್ದಾನೆ. ಇವರ ತಾಯಿಗೆ ಪಿಂಚಣಿ ಹಣ ಬರುತ್ತಿದ್ದು, ಆಕೆ ಪ್ರತಿ ತಿಂಗಳು ಹಿರಿಯ ಮಗನಿಗೆ 300 ರೂ. ಮತ್ತು ಕಿರಿಯ ಮಗನಿಗೆ 200 ರೂ. ಕೊಡುತ್ತಾರೆ. ತನಗಿಂತ ತನ್ನ ಅಣ್ಣನಿಗೆ 100 ರೂಪಾಯಿ ಹೆಚ್ಚುವರಿಯಾಗಿ ಕೊಡುವುದಕ್ಕೆ ಕೋಪಗೊಂಡ ರಾಮಣ್ಣ ತನ್ನ ತಂದೆ- ತಾಯಿ ಮೇಲೆಯೇ ದೊಣ್ಣೆಯಿಂದ ಹಲ್ಲೆಗೆ ಯತ್ನಿಸಿದ. ಈ ವೇಳೆ ಕೋಪ ತಾರಕಕ್ಕೇರಿ ಅಣ್ಣ ಲಕ್ಷ್ಮಣ್ಣನ ಮೇಲೂ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ತೀವ್ರವಾಗಿ ಗಾಯಗೊಂಡ ಲಕ್ಷ್ಮಣ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಈ ಸಂಬಂಧ ಲಕ್ಷ್ಮಣ್ಣನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಅಣ್ಣನನ್ನು ಕೊಂದು ತಲೆಮರೆಸಿಕೊಂಡಿರುವ ರಾಮಣ್ಣನಿಗಾಗಿ ಶೋಧ ಮುಂದುವರಿಸಿದ್ದಾರೆ.
PublicNext
02/08/2021 10:39 pm