ಕೊಚ್ಚಿ: ಅವರಿಬ್ಬರು ಪ್ರಯಣದ ಪಕ್ಷಿಗಳು..ಡೆಂಟಲ್ ಕೋರ್ಸ್ ಮಾಡುತ್ತಿದ್ದವಳು ಪ್ರೇಮಕ್ಕೆ ಜಾರಿ ಕೊನೆಗೆ ಮಸಣ ಸೇರಿರುವ ಘಟನೆ ಕೊಚ್ಚಿಯ ಕೋತಮಂಗಲಂ ಬಳಿಯ ನೆಲ್ಲಿಕುಳಿಯಲ್ಲಿ ನಡೆದಿದೆ. ಹೌದು ಕೋತಮಂಗಲಂದ ಇಂದಿರಾ ಗಾಂಧಿ ಕಾಲೇಜಿನಲ್ಲಿ ಅಂತಿಮ ವರ್ಷದ ಡೆಂಟಲ್ ಕೋರ್ಸ್ ಮಾಡುತ್ತಿದ್ದ ಮಾನಸ ಪಿ.ವಿ (24) ಜಾಲತಾಣದಲ್ಲಿ ಪರಿಚಯವಾದ ರಾಖಿಲ್ (32) ಯನ್ನು ಪ್ರೀತಿಸುತ್ತಿದ್ದಳು.
ಮೊದಮೊದಲು ಸ್ನೇಹಿತರಾದ ಇವರು ನಂತರ ಇವರ ಸ್ನೇಹ ಪ್ರೀತಿಗೆ ತಿರುಗಿತ್ತು. ಮಾನಸ ಕಣ್ಣೂರು ಮೂಲದವಳು. ತನ್ನ ಫ್ರೆಂಡ್ಸ್ ಜತೆ ಕೋತಮಂಗಲಂದ ನೆಲ್ಲಿಕುಳಿಯಲ್ಲಿ ರೂಮ್ ನಲ್ಲಿ ಉಳಿದುಕೊಂಡಿದ್ದಳು. ರಾಖಿಲ್ ಕೂಡ ಕಣ್ಣೂರು ಮೂಲದವನೆ. ಒಂದು ತಿಂಗಳ ಹಿಂದೆ ಮಾನಸ, ಲವ್ ಬ್ರೇಕಪ್ ಮಾಡಿಕೊಳ್ಳುವುದಾಗಿ ರಾಖಿಲ್ ಬಳಿ ಹೇಳಿದ್ದಳಂತೆ. ಇದು ಆತನ ಕೋಪಕ್ಕೆ ಕಾರಣವಾಗಿ ಕಿರುಕುಳ ನೀಡಲು ಆರಂಭಿಸಿದ್ದ.
ಆತನ ಕಿರುಕುಳ ತಾಳದೇ ಮಾನಸ, ಕಣ್ಣೂರು ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದಳು. ಇದಾದ ಬಳಿಕ ರಾಖಿಲ್ ನನ್ನು ಪೊಲೀಸರು ಬಂಧಿಸಿದ್ದರು. ಆದರೆ, ಪಾಲಕರ ಮನವಿ ಮೇರೆಗೆ ಆತನಿಗೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿತ್ತು. ಇದರಿಂದ ಕೋಪಗೊಂಡಿದ್ದ ರಾಖಿಲ್, ಮಾನಸ ರೂಮ್ ಗೆ ತೆರಳಿ, ಆಕೆ ಮೇಲೆ ಗುಂಡಿನ ದಾಳಿ ನಡೆಸಿ, ತಾನೂ ಗುಂಡು ಹಾರಿಸಿಕೊಂಡು ಪ್ರಾಣ ಬಿಟ್ಟಿದ್ದಾನೆ.
PublicNext
31/07/2021 04:29 pm