ಚಿಕ್ಕಬಳ್ಳಾಪುರ: ನಾಪತ್ತೆಯಾಗಿದ್ದ ಅಪ್ಪ ಹಾಗೂ ಮಗು ಶವವಾಗಿ ಕೃಷಿಹೊಂಡದಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬ್ರಾಹ್ಮಣರಹಳ್ಳಿ ಬಳಿ ನಡೆದಿದೆ.
ಬ್ರಾಹ್ಮಣರಹಳ್ಳಿಯ ನಿವಾಸಿ ರವಿ(35) ಹಾಗೂ 9 ತಿಂಗಳ ಮಗು ಮೃತ ದುರ್ದೈವಿಗಳು. ದಿನಸಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ರವಿ ಪತ್ನಿ 3 ತಿಂಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಹೀಗಾಗಿ ಪುಟ್ಟ ಮಗುವಿನ ಆರೈಕೆಗಾಗಿ 15 ದಿನಗಳ ಹಿಂದೆ ರವಿ ಮತ್ತೊಂದು ಮದುವೆಯಾಗಿದ್ದರು. ಆದರೆ ಶುಕ್ರವಾರ ರಾತ್ರಿಯಿಂದ ನಾಪತ್ತೆಯಾಗಿದ್ದ ರವಿ ಹಾಗೂ ಮಗು ಇಂದು ಬೆಳಗ್ಗೆ ಕೃಷಿಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
PublicNext
27/02/2021 04:54 pm