ದಾವಣಗೆರೆ: ಅಡಿಕೆ ತುಂಬಿದ್ದ ಲಾರಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಪೊಲೀಸರು, ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಓರ್ವ ವ್ಯಕ್ತಿ ಸೇರಿ ಮೂವರನ್ನ ಬಂಧಿಸಿದ್ದಾರೆ.
ಅಲ್ಲದೇ ಬಂಧಿತರಿಂದ 1 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 300 ಅಡಿಕೆ ಮೂಟೆಗಳು, ರಾಜಸ್ತಾನ ನೋಂದಣಿ ಹೊಂದಿರುವ ಒಂದು ಲಾರಿ, ಎರಡು ಕಾರ್ ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಭೀಮಸಮುದ್ರದಿಂದ ದೆಹಲಿಗೆ ಹೊರಟಿದ್ದ ಅಡಿಕೆ ತುಂಬಿದ್ದ ಲಾರಿಯನ್ನ ಹುಬ್ಬಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಅಡ್ಡಗಟ್ಟಿ, ಚಾಲಕನ ಕಣ್ಣಿಗೆ ಖಾರದಪುಡಿ ಎರಚಿ ದುಷ್ಕರ್ಮಿಗಳು ದರೋಡೆ ಮಾಡಿದ್ದರು. ಬಳಿಕ ಚಾಲಕನನ್ನು ಹುಬ್ಬಳ್ಳಿ ಸಮೀಪ ಬಿಟ್ಟು ಲಾರಿ ಸಮೇತ ಪರಾರಿಯಾಗಿದ್ದರು. ಈ ಬಗ್ಗೆ ಚಿತ್ರದುರ್ಗ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿತ್ತು.
ಪ್ರಕರಣ ಬೇಧಿಸಿರುವ ಪೊಲೀಸರು ಮಾಲು ಸಮೇತ ಲಾರಿ ವಶಕ್ಕೆ ಪಡೆದಿದ್ದು, ಚನ್ನಗಿರಿಯ ಸಲ್ಮಾನ್ ಎಂಬುವವನು ಸೇರಿ ಮೂವರನ್ನ ಬಂಧಿಸಿದ್ದಾರೆ. ಕೃತ್ಯದಲ್ಲಿ ಇನ್ನು 12 ಜನ ಭಾಗಿಯಾಗಿರುವ ಮಾಹಿತಿ ಇದ್ದು, ಪರಾರಿ ಆಗಿರುವರಿಗಾಗಿ ಪತ್ತೆಗೆ ಶೋಧ ಮುಂದುವರಿಸಿದ್ದಾರೆ.
PublicNext
23/02/2021 06:28 pm