ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದ್ಯದ ಅಮಲಿನಲ್ಲಿ ಮಗಳನ್ನೇ ಕೊಚ್ಚಿ ಕೊಂದ..!

ರಾಯಚೂರು: ವ್ಯಕ್ತಿಯೊಬ್ಬ ಮದ್ಯದ ಅಮಲಿನಲ್ಲಿ ಜಗಳವಾಡಿ ಹೆತ್ತ ಮಗಳನ್ನೇ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಆಘಾತಕಾರಿ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಜಂತಿ ಗ್ರಾಮದಲ್ಲಿ ನಡೆದಿದೆ.

ಯರಜಂತಿಯ ಮೋನಮ್ಮ(14) ಕೊಲೆಯಾದ ಮಗಳು. ಆರೋಪಿ ತಿಮ್ಮಯ್ಯ ಕೃತ್ಯದ ಬಳಿಕ ಪರಾರಿಯಾಗಿದ್ದಾನೆ. ಕೊಲೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲವಾದರೂ ಕುಡಿತದ ಅಮಲೇ ಕೊಲೆಗೆ ಕಾರಣ ಎನ್ನಲಾಗಿದೆ.

ಮದ್ಯ ವ್ಯಸನಿಯಾಗಿದ್ದ ತಿಮ್ಮಯ್ಯ ಪ್ರತಿ ದಿನ ರಾತ್ರಿ ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ನಿನ್ನೆ ರಾತ್ರಿ ಕೂಡ ಕಂಠಪೂರ್ತಿ ಕುಡಿದಿದ್ದ ಆರೋಪಿ ಬೆಳಗಿನ ಜಾವ ಮಗಳನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಈ ಸಂಬಂಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಿದ್ದಾರೆ.

Edited By : Vijay Kumar
PublicNext

PublicNext

22/02/2021 05:14 pm

Cinque Terre

46.03 K

Cinque Terre

1

ಸಂಬಂಧಿತ ಸುದ್ದಿ