ದಾವಣಗೆರೆ: ಕುಡಿಯಲು ದುಡ್ಡು ಕೊಡದ ಹಿನ್ನೆಲೆಯಲ್ಲಿ ಚಾಕುವಿನಿಂದ ಇರಿದು ಪತಿ ಪತ್ನಿಯನ್ನು ಕೊಲೆ ಮಾಡಿದ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಅಮರಾವತಿ ಗ್ರಾಮದಲ್ಲಿ ನಡೆದಿದೆ. ಇನ್ನು ಕೊಲೆ ಮಾಡಿದ ಬಳಿಕ ಪಾಪಿ ಪತಿ ತಾನು ಅದೇ ಚಾಕುವಿನಿಂದ ಇರಿದುಕೊಂಡಿದ್ದಾನೆ.
ಸೌಭಾಗ್ಯ ಮ್ಮ (50) ಕೊಲೆಯಾದ ಮಹಿಳೆ ಪರಶುರಾಮ (54) ಕೊಲೆ ಮಾಡಿ ತಾನು ಇರಿದುಕೊಂಡು ಆಸ್ಪತ್ರೆ ಸೇರಿದ ಪತಿರಾಯ.
ಮದ್ಯದ ದಾಸನಾದ ಪತಿ ಪತ್ನಿ ಅಮರಾವತಿ ಗ್ರಾಮದಲ್ಲಿ ವಾಸವಿದ್ದರು. ಕುಡಿತದ ಚಟ ಹೆಚ್ಚಾಗಿದ್ದಕ್ಕೆ ಭಾಗ್ಯಮ್ಮ ದುಡ್ಡು ಕೊಡದಿದ್ದಾಗ ಆಕ್ರೋಶಗೊಂಡ ಪರಶುರಾಮ ಚಾಕುವಿನಿಂದ ಇರಿದು ಆಕೆಯನ್ನು ಕೊಲೆ ಮಾಡಿ ಬಳಿಕ ತಾನು ಕುತ್ತಿಗೆಗೆ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ, ಗಾಯಗೊಂಡ ಪರಶುರಾಮನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
PublicNext
19/02/2021 04:54 pm