ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಇಎನ್ ಪೊಲೀಸರ ಕಾರ್ಯಾಚರಣೆ ಅಫೀಮು ಮಾರಾಟ ಮಾಡುತ್ತಿದ್ದ ಮೂವರು ಅಂದರ್

ಬೆಳಗಾವಿ : ಕುಂದಾನಗರಿಯಲ್ಲಿ 1 ಕೆಜಿ 15 ಗ್ರಾಂ ಅಫೀಮು ಜಪ್ತಿ ಮಾಡಿಕೊಂಡ ಸಿಇಎನ್ ಪೊಲೀಸರು ಪಾನ್ ಶಾಪ್ ನಲ್ಲಿ ಅಫೀಮು ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದವರ ಹೆಡೆಮುರಿ ಕಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದ ರಾಜಸ್ಥಾನ ದಾಬಾ ಬಳಿ ಪಾನ್ ಶಾಪ್ ನಲ್ಲಿ ಅಫೀಮು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು 20 ಲಕ್ಷ ರೂಪಾಯಿ ಮೌಲ್ಯದ 1 ಕೆಜಿ 15 ಗ್ರಾಂ ಅಫೀಮು ಜಪ್ತಿ ಮಾಡಿದ್ದಾರೆ.

ಬರಖತ್ ಖಾನ್, ಕಮಲೇಶ್ ಬೇನಿವಾಲಾ, ಸರವನ್ ಅಸನೋಯಿ ಬಂಧಿತ ಆರೋಪಿಗಳು. ರಾಜಸ್ಥಾನ ಮೂಲದ ಬರಖತ್ ಖಾನ್, ಕಮಲೇಶ್ ಬೇನಿವಾಲಾ, ಸರವನ್ ಅಸನೋಯಿ ಎಂಬುವವರು ಬೆಳಗಾವಿಯಲ್ಲಿ ವಾಸವಿದ್ದು ಮಾರ್ವಾಡಿಗಳನ್ನ ಟಾರ್ಗೆಟ್ ಮಾಡಿ ಅಫೀಮು ಸಪ್ಲೈ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಲಾರಿಗಳ ಮೂಲಕ ರಾಜಸ್ಥಾನದಿಂದ ಬೆಳಗಾವಿಗೆ ಅಫೀಮು ತರುತ್ತಿದ್ದ ಈ ಗ್ಯಾಂಗ್ ಸದ್ಯ ಬೆಳಗಾವಿಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಬಂಧಿಯಾಗಿದ್ದಾರೆ.

Edited By : Nirmala Aralikatti
PublicNext

PublicNext

19/02/2021 04:39 pm

Cinque Terre

67.62 K

Cinque Terre

0