ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಲ್ಲು ಶಿಕ್ಷೆಗೆ ಒಳಗಾದ ಭಾರತದ ಮೊದಲ ಮಹಿಳೆ ಈಕೆ: ಕಾರಣವೇನು?

ಉತ್ತರಪ್ರದೇಶ: ತನ್ನದೇ ಕುಟುಂಬದ ಏಳು ಸದಸ್ಯರನ್ನು ಬರ್ಬರವಾಗಿ ಕೊಲೆ ಮಾಡಿದ್ದ ಉತ್ತರಪ್ರದೇಶದ ಶಬ್ನಮ್‌ಳನ್ನ ಶೀಘ್ರ ಗಲ್ಲಿಗೇರಿಸಲಾಗುತ್ತಿದೆ. ಸ್ವತಂತ್ರ ಭಾರತದಲ್ಲಿ ಮರಣ ದಂಡನೆಗೆ ಒಳಗಾಗಲಿರುವ ಮೊದಲ ಮಹಿಳೆ ಈಕೆ. ಪ್ರಸ್ತುತ ರಾಂಪುರ ಜಿಲ್ಲಾ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸುತ್ತಿರುವ ಶಬ್ನಮ್​ಗೆ ಮಥುರಾ ಜೈಲಿನಲ್ಲಿ ಗಲ್ಲಿಗೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪ್ರಕರಣದ ಹಿನ್ನೆಲೆ: ಶಬ್ನಮ್ ಹಾಗೂ ಸಲೀಂ ಎಂಬ ವ್ಯಕ್ತಿ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಶಬ್ನಮ್ ಕುಟುಂಬಸ್ಥರ ವಿರೋಧವಿತ್ತು. ಪ್ರೇಮಕ್ಕೆ ಅಡ್ಡಿಯಾದ ಜೀವ ತೆಗೆಯಲು ನಿರ್ಧರಿಸಿದ ಆಕೆ, ಸಲೀಂ ಜೊತೆ ಸೇರಿಕೊಂಡು 2008ರ ಏಪ್ರಿಲ್ 14ರಂದು ತನ್ನ ತಂದೆ, ತಾಯಿ, ಇಬ್ಬರು ಸಹೋದರರು, ಸಹೋದರಿ, ಸೋದರ ಮಾವ ಹಾಗೂ 10 ವರ್ಷದ ಸೋದರಳಿಯನನ್ನು ಕೊಲೆ ಮಾಡಿದ್ದರು. ಊಟದಲ್ಲಿ ಮಾತ್ರೆ ಹಾಕಿ, ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದರು. ಘಟನೆ ನಡೆದ ವೇಳೆ ಶಬ್ನಮ್ ಗರ್ಭಿಣಿ ಕೂಡ ಆಗಿದ್ದರು.

ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ ಶಬ್ನಮ್ ಮತ್ತು ಸಲೀಂ ಇಬ್ಬರನ್ನೂ ಜಿಲ್ಲಾ ಪೊಲೀಸರು ಬಂಧಿಸಿದ್ದರು. ಪ್ರಕರಣ ಸಂಬಂಧ ಎರಡು ವರ್ಷಗಳ ಕಾಲಾವಧಿಯಲ್ಲಿ 100 ಬಾರಿ ಕೋರ್ಟ್‌​ನಲ್ಲಿ ವಿಚಾರಣೆ ನಡೆದಿದ್ದು, 649 ಪ್ರಶ್ನೆಗಳನ್ನು ಕೇಳಿ, ಕೊನೆಯದಾಗಿ 160 ಪುಟಗಳ ತೀರ್ಪನ್ನು ನ್ಯಾಯಾಲಯ ಪ್ರಕಟಿಸಿತ್ತು.

ಶಬ್ನಮ್ ಕೃತ್ಯ ಎಸಗುವ ವೇಳೆಗೆ ಸಲೀಂನ ಮಗು ಈಕೆ ಹೊಟ್ಟೆಯಲ್ಲಿ ಬೆಳೆಯುತ್ತಿತ್ತು. ಜೈಲಿನಲ್ಲಿ ಜನಿಸಿದ್ದ ಆ ಗಂಡು ಮಗುವಿಗೆ ಈಗ 12 ವರ್ಷ ವಯಸ್ಸಾಗಿದೆ. ಕಾನೂನು ನಿಯಮದಂತೆ ಆರು ವರ್ಷದ ಬಳಿಕ ಬಾಲಕನನ್ನು ಜೈಲಿನಿಂದ ಹೊರ ಕಳುಹಿಸಲಾಗಿತ್ತು. ಶಬ್ನಮ್​ನ ಸ್ನೇಹಿತ ಉಸ್ಮಾನ್ ಸೈಫಿ ಎಂಬುವರು ಈ ಬಾಲಕನನ್ನು ಸಾಕುವ ಜವಾಬ್ದಾರಿ ವಹಿಸಿಕೊಂಡು, ಶಿಕ್ಷಣ ಕೊಡಿಸುತ್ತಿದ್ದಾರೆ.

ಡೆತ್​ ವಾರೆಂಟ್​ಗೆ ರಾಷ್ಟ್ರಪತಿ ಯಾವ ಕ್ಷಣದಲ್ಲಾದರೂ ಸಹಿ ಹಾಕಲಿದ್ದು, ಮರಣದಂಡನೆಯ ದಿನಾಂಕ ಶೀಘ್ರದಲ್ಲೇ ಪ್ರಕಟವಾಗಲಿದೆ. ಈ ಮಧ್ಯೆ ಈ ಬಾಲಕ ರಾಷ್ಟ್ರಪತಿ ರಾಮ್​ ನಾಥ್​ ಕೋವಿಂದ್​ ಬಳಿ ನನ್ನ ಅಮ್ಮನನ್ನು ಕ್ಷಮಿಸಿ ಎಂದು ಮನವಿ ಮಾಡಿದ್ದಾನೆ. ಆದ್ರೆ ಮಥುರಾ ಜೈಲಿನಲ್ಲಿ ಶಬನಮ್ ಳನ್ನು ಗಲ್ಲಿಗೇರಿಸಲು ಸಕಲ ತಯಾರಿ ನಡೆದಿದೆ.

Edited By : Nagaraj Tulugeri
PublicNext

PublicNext

19/02/2021 03:27 pm

Cinque Terre

66.07 K

Cinque Terre

5