ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೆಲಂಗಾಣದ ವಕೀಲ ದಂಪತಿ ಹತ್ಯೆ: ಎಫ್ಐಆರ್ ದಾಖಲು

ತೆಲಂಗಾಣ: ಇಲ್ಲಿನ ಪೆದ್ದಂಪಲ್ಲಿ ಜಿಲ್ಲೆಯಲ್ಲಿ ನಡೆದ ಹೈಕೋರ್ಟ್ ವಕೀಲ ದಂಪತಿಯ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದು, ಈ ಕುರಿತು ಎಫ್ಐಆರ್ ದಾಖಲಿಸಲಾಗಿದೆ. ಮೃತ ವಾಮನ್ ರಾವ್ ಅವರ ತಂದೆ ಕಿಶನ್ ರಾವ್ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಮೂವರ ವಿರುದ್ಧ ಪಿತೂರಿ ಮತ್ತು ಕೊಲೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.

ವೆಲ್ಡಿ ವಸಂತ ರಾವ್, ಕುಂಟಾ ಶ್ರೀನಿವಾಸ್ ಮತ್ತು ಅಕ್ಕಪಾಕ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 120 ಬಿ, 302, 341 ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೆದ್ದಪಳ್ಳಿ ಜಿಲ್ಲೆಯ ರಾಮಗಿರಿ ವಲಯದ ಕಲ್ವಾಚಾರ್ಲದಲ್ಲಿ ನಿನ್ನೆ ವಾಮನ್ ರಾವ್ ಮತ್ತು ಅವರ ಪತ್ನಿಯನ್ನು ಅಪರಿಚಿತ ಹಲ್ಲೆಕೋರರು ನಡುರಸ್ತೆಯಲ್ಲಿಯೇ ಹತ್ಯೆಗೈದಿದ್ದರು.

Edited By : Nagaraj Tulugeri
PublicNext

PublicNext

19/02/2021 12:42 pm

Cinque Terre

80.64 K

Cinque Terre

2

ಸಂಬಂಧಿತ ಸುದ್ದಿ