ನವದೆಹಲಿ: ರಾಮ ಮಂದಿರ ದೇಣಿಗೆ ಸಂದರ್ಭದಲ್ಲಿ ನಡೆದ ವಾಗ್ವಾದ ಕಾರಣಕ್ಕೆ ಭಜರಂಗ ದಳ ಕಾರ್ಯಕರ್ತನ ಕೊಲೆ ಮಾಡಲಾಗಿದೆ.
ಫೆಬ್ರವರಿ 10ರ ಬುಧವಾರ ರಾತ್ರಿ ನವದೆಹಲಿಯ ಮಂಗೋಲಪುರಿ ಪ್ರದೇಶದಲ್ಲಿ ಈ ಕೂಲೆ ನಡೆದಿದೆ. ರಿಂಕು ಶರ್ಮಾ (26) ಎಂಬಾತನೇ ಕೊಲೆಯಾದ ದುರ್ದೈವಿ. ರಾಮ ಮಂದಿರ ದೇಣಿಗೆ ಸಂಗ್ರಹ ವಿಚಾರವಾಗಿ ರಿಂಕು ಶರ್ಮಾ ಹಾಗೂ ಕೊಲೆಗೈದ ಆರೋಪಿಗಳ ನಡುವೆ ವಾಗ್ವಾದ ನಡೆದಿತ್ತು. ನಂತರ ಸ್ಥಳೀಯರ ಮಧ್ಯಸ್ಥಿಕೆಯಿಂದ ವಿವಾದ ಬಗೆ ಹರಿದಿತ್ತು.
ನಂತರ ಮತ್ತೆ ವಿವಾದ ಭುಗಿಲೆದ್ದು ಆರೋಪಿತರು ರಿಂಕು ಶರ್ಮಾ ಮನೆಗೆ ನುಗ್ಗಿ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ರಿಂಕು ಪೋಷಕರು ಮನೆಯಲ್ಲೇ ಇದ್ದರು. ನಾಲ್ವರು ಆರೋಪಿಗಳು ರಿಂಕು ಶರ್ಮಾ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರಿಂದ ರಿಂಕು ಮೃತಪಟ್ಟಿದ್ದಾನೆ ಎಂದು ಆತನ ಪೋಷಕರು ದೂರಿದ್ದಾರೆ.
ಪ್ರಕರಣದ ಆರೋಪಿಗಳಾದ ಮೊಹಮ್ಮದ್ ಇಸ್ಲಾಂ, ದನೀಶ್ ನಸರುದ್ದೀನ್, ದಿಲ್ಶಾನ್ ಹಾಗೂ ದಿಲ್ಶಾನ್ ಇಸ್ಲಾಂ ಎಂದು ಗುರುತಿಸಲಾಗಿದೆ. ಈ ಎಲ್ಲ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿಗಳು ಈ ಮುಂಚೆ ಯಾವುದೇ ಅಪರಾಧಿ ಹಿನ್ನಲೆ ಹೊಂದಿರಲಿಲ್ಲ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಸುಧಾಂಶು ಧಮಾ ಹೇಳಿದ್ದಾರೆ.
PublicNext
12/02/2021 01:08 pm