ಹುಬ್ಬಳ್ಳಿ: ಸಾಮಾಜಿಕ ಜಾಲತಾಣದಲ್ಲಿ ಪ್ರೀತಿ ಪ್ರೇಮ ಹಾಗೂ ಸ್ನೇಹದ ಹೆಸರಿನಲ್ಲಿ ಉತ್ತಮವಾಗಿ ಜೀವನ ನಡೆಸಿದವರಿಗಿಂತ ಕೈ ಸುಟ್ಟುಕೊಂಡವರೇ ಜಾಸ್ತಿಯಾಗಿದ್ದಾರೆ. ಫೇಸ್‌ಬುಕ್ ಲವ್ ಸ್ಟೋರಿಯಿಂದ 15 ಲಕ್ಷ ಪಂಗನಾಮ ಹಾಕಿಸಿಕೊಂಡ ಘಟನೆ ಮಾಸುವ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಹುಬ್ಬಳ್ಳಿ- ಧಾರವಾಡ ಸೈಬರ್ ಕ್ರೈಮ್ ಪೊಲೀಸರು ಕಾರ್ಯಾಚರಣೆ ಮಾಡಿ ಫೇಸ್ ಬುಕ್ ನಲ್ಲಿ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡು ನಂತರ ಹಾಯ್ ಬೈ ಅನ್ನುತ್ತಾ ಚಾಟಿಂಗ್ ಮಾಡಿ ತದನಂತರ ನನ್ನ ತಾಯಿಗೆ ಹುಷಾರಿಲ್ಲ ಎಂದು ಹೇಳಿ ಡೆಬಿಟ್ ಕಾರ್ಡ್ ಮೂಲಕ ಹಣ ವರ್ಗಾವಣೆ ಮಾಡಿಕೊಂಡ ಆರೋಪಿಯನ್ನು ಬಂಧಿಸಿದ್ದಾರೆ. ಹುಬ್ಬಳ್ಳಿಯ ರೈಲ್ವೆ ಉದ್ಯೋಗಿಯಾಗಿರುವ ವಿಜಯಕುಮಾರ್ ಯಾಮಾ ಎಂಬುವರ ಮಗಳಿಗೆ ಯುವಕ ಮೋಸ ಮಾಡಿದ ಕುರಿತು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಲಾಗಿತ್ತು. ದೂರು ದಾಖಲು ಮಾಡಿಕೊಂಡ ಸೈಬರ್ ಕ್ರೈಮ್ ಇನ್ಸ್ಪೆಕ್ಟರ್ ಎಸ್ ಬಿ ಮಾಳಗೊಂಡ ಮತ್ತು ಸಿಬ್ಬಂದಿ ಕಾರ್ಯಾಚರಣೆ ಮಾಡಿ ಫೇಸ್ ಬುಕ್ ನಲ್ಲಿ ಪರಿಚಯ ಮಾಡಿಕೊಂಡ ಆರೋಪಿಯನ್ನು ಬಂಧನ ಮಾಡಿದ್ದಾರೆ.
ಆರೋಪಿಯ ಕುರಿತು ಮಾಹಿತಿಯನ್ನು ಪಡೆದುಕೊಂಡ ಸೈಬರ್ ಕ್ರೈಮ್ ಪೊಲೀಸರು ರೋಹಿತ್ ಕುಮಾರ್ ವೆಂಕಟೇಶ್ ಕೃಷ್ಟಯ್ಯನಪಾಳ್ಯ ಬೆಂಗಳೂರು ಆರೋಪಿಯನ್ನು ಬಂಧನ ಮಾಡಿದ್ದಾರೆ.
PublicNext
11/02/2021 03:59 pm