ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವ್ಯಾಲೆಂಟೈನ್ಸ್ ಡೇ ಮುನ್ನ ದುರಂತ : ಪ್ರಿಯತಮನ ಮಾತಿಗೆ ಪ್ರಾಣಬಿಟ್ಟ ಪ್ರಿಯತಮೆ

ತುಮಕೂರು: ಮನಸಾರೆ ಪ್ರೀತಿಸಿದವರಿಗೆ ತಮ್ಮ ಪ್ರೀತಿಪಾತ್ರರು ಹೇಳುವ ಪ್ರತಿಯೊಂದು ಮಾತುಗಳು ಅತ್ಯಂತ ಮುಖ್ಯವಾಗಿರುತ್ತವೆ.ಅವರು ಕೋಪದಲ್ಲಿ ಹೇಳುವ ಮಾತುಗಳಿಂದ ಪ್ರಾಣ ಕಳೆದುಕೊಳ್ಳುವವರು ಇದ್ದಾರೆ. ಹೌದು ಪ್ರೀತಿಯಲ್ಲಿ ಸರಸ-ವಿರಸ ಸಾಮಾನ್ಯ ಆದ್ರೆ ಕೋಪದ ಕೈಗೆ ಬುದ್ಧಿ ಕೊಟ್ಟರೆ ಅಲ್ಲೋಲಕಲ್ಲೋಲವೇ ಆಗಬಹುದು. ಇಲ್ಲೊಬ್ಬ ಪ್ರಿಯತಮ ನಾಲಗೆ ಹರಿಬಿಟ್ಟಿ ಕಾರಣ, ನೊಂದ ಪ್ರಿಯತಮೆ ವಿಷ ಕುಡಿದು ದುರಂತ ಅಂತ್ಯ ಕಂಡ ದುರ್ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.

ಫರ್ಹಾನ(19) ಮೃತ ದುರ್ದೈವಿ. ತುಮಕೂರು ನಗರದ ಕ್ಯಾತಸಂದ್ರದ ಗಿರಿನಗರದಲ್ಲಿ ಈ ಘಟನೆ ಸಂಭವಿಸಿದೆ. ಕಳೆದ 4 ವರ್ಷದಿಂದ ಫರ್ಹಾನ ಮತ್ತು ನೈಮನ್ ಪ್ರೀತಿಸುತ್ತಿದ್ದರು. ಇತ್ತೀಚಿಗೆ ನೈಮನ್ ತನ್ನ ಪ್ರೇಯಸಿಯ ನಡವಳಿಕೆ ಬಗ್ಗೆ ತುಚ್ಛವಾಗಿ ಮಾತನಾಡಿದ್ದ ಎನ್ನಲಾಗಿದೆ. ಪ್ರಿಯಕರನ ಮಾತಿನಿಂದ ನೊಂದ ಯುವತಿ ಫೆ.5ರಂದು ವಿಷ ಕುಡಿದಿದ್ದಳು.

ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಯುವತಿ ಚಿಕಿತ್ಸೆ ಫಲಿಸದೆ ನಿನ್ನೆ(ಮಂಗಳವಾರ) ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು.

ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಿಯಕರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Edited By : Nirmala Aralikatti
PublicNext

PublicNext

10/02/2021 07:37 am

Cinque Terre

117.54 K

Cinque Terre

13

ಸಂಬಂಧಿತ ಸುದ್ದಿ