ಬೆಂಗಳೂರು: ಇದು ಕಾಲೇಜಿನ ಲೆಕ್ಚರರ್ ರೊಬ್ಬರ ಮಗನ ಕಾಮಪುರಾಣದ ಸುದ್ದಿ. ತನ್ನ ಲೆಕ್ಚರರ್ ನನ್ನು ನೋಡೋಕೆ ಮನೆಗೆ ಬಂದ ವಿದ್ಯಾರ್ಥಿಯನ್ನೇ ಮಗ ಕ್ಯಾಚ್ ಹಾಕಿದ್ದಾನೆ. ಹೌದು...ಬೆಂಗಳೂರಿನ ಕಾಲೇಜ್ ವೊಂದರ ಲೆಕ್ಚರರ್ ರೊಬ್ಬರ ಮಗ ಚಂದನ್ ಎನ್ನುವಾತ ಮದ್ವೆಯಾಗುವುದಾಗಿ ನಂಬಿಸಿ ತನ್ನ ಕಾಮದ ತೀಟೆ ತೀರಿಸಿಕೊಂಡು ಇದೀಗ ಹೊಸ ವರಸೆ ಶುರುಮಾಡಿದ್ದಾನೆ ಎಂದು ಸಂತ್ರಸ್ತ ಯುವತಿಯೋರ್ವಳು ನ್ಯಾಯಕ್ಕಾಗಿ ವಿದ್ಯಾರಣ್ಯಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಸದ್ಯ ಯುವತಿ ದೂರಿನ ಮೇರೆಗೆ ಆರೋಪಿ ಚಂದನ್ ನನ್ನು ಪೊಲೀಸರು ಬಂಧಿಸಿದ್ದಾರೆ.ಚಂದನ್ ತಾಯಿ ನಗರದ ಕಾಲೇಜೊಂದರ ಲೆಕ್ಚರರ್. ಆ ಯುವತಿಯೂ ಅದೇ ಕಾಲೇಜಿನ ವಿದ್ಯಾರ್ಥಿನಿ. ಲೆಕ್ಚರರ್ ನನ್ನು ನೋಡೋಕೆ ಬಂದ ಯುವತಿ ಚಂದನ್ ಪರಿಚಯವಾಗಿ,ಪರಿಚಯ ಪ್ರೇಮವಾಗಿ,ಪ್ರೇಮ ಕಾಮವಾಗಿ ನಡೆಯಬಾರದ್ದೇಲ್ಲಾ ನಡೆದು ಹೋಗಿದೆ. ಕಾಮದಾಹದಲ್ಲಿದ್ದ ಚಂದನ್ ಮದುವೆಯಾಗುವುದಾಗಿ ಹೇಳಿ ಯುವತಿಯನ್ನು ಯಾಮಾರಿಸಿ ತನ್ನ ತೃಷೆ ತೀರಿಸಿಕೊಂಡು ಸದ್ಯ ಕೈಕೊಟ್ಟಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಕಳೆದ ಮೂರು ವರ್ಷಗಳಿಂದ ಬಲವಂತವಾಗಿ ಲೈಂಗಿಕ ಸಂಪರ್ಕ ಹೊಂದಿದ್ದ ಈತನಿಂದಾಗಿ ವಿದ್ಯಾರ್ಥಿನಿ ಎರಡು ಬಾರಿ ಗರ್ಭಿಣಿಯಾದರೂ ಬಲವಂತವಾಗಿ ಅಬಾರ್ಷನ್ ಮಾಡಿಸಿದ್ದ. ಅಲ್ಲದೆ ಮದುವೆಗಾಗಿ 5ರಿಂದ 6 ಲಕ್ಷ ಹಣವನ್ನೂ ಪಡೆದಿದ್ದ. ಇದೀಗ ಮದುವೆ ಆಗಲ್ಲ ಎಂದು ವಂಚಿಸಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
PublicNext
06/02/2021 03:10 pm