ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುವರಾಜನ ವಂಚನೆ ಕೇಸ್: ಬಗೆದಷ್ಟು ಆಳ, ಕಂಡಷ್ಟು ವಿಸ್ತಾರ

ಬೆಂಗಳೂರು : ನೂರಾರು ಕೋಟಿ ನಗದು ವ್ಯವಹಾರದಲ್ಲಿ ವಂಚನೆ ಮಾಡಿದ್ದ ಚೀಟರ್ ಯುವರಾಜ್​ನ ವಿಚಾರಣೆ ಚುರುಕುಗೊಂಡಂತೆಲ್ಲ ಒಂದೊಂದೇ ಸ್ಫೋಟಕ ವಿಚಾರಗಳು ಹೊರ ಬರುತ್ತಿವೆ. ಪ್ರಭಾವಿ ಸಚಿವರನ್ನು ತೋರಿಸಿ ಕಲರ್- ಕಲರ್ ಕಾಗೆ ಹಾರಿಸುತ್ತಿದ್ದ ಯುವರಾಜ್, ಸಚಿವರ ಹೆಸರಿನ ಲೆಟರ್ ಹೆಡ್‌ಗಳನ್ನು ಫೋರ್ಜರಿ ಮಾಡುತ್ತಿದ್ದನಾ? ಎಂಬ ಅನುಮಾನ ಸದ್ಯ ಸಿಸಿಬಿ ಅಧಿಕಾರಿಗಳಲ್ಲಿ ಮೂಡಿದೆ.

ಸಿಸಿಬಿಯಿಂದ ಬಂಧಿತನಾಗಿರುವ ವಂಚಕ ಯುವರಾಜ್ ಅಲಿಯಾಸ್ ಸ್ವಾಮಿಯನ್ನ ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕಳೆದ ಡಿಸೆಂಬರ್ 16 ರಂದು ನಾಗರಭಾವಿಯ ಯುವರಾಜ್ ನಿವಾಸದ ಮೇಲೆ ಸಿಸಿಬಿ ಎಸಿಪಿ ನಾಗರಾಜ್ ನೇತೃತ್ವದ ತಂಡ ದಾಳಿ ಮಾಡಿತ್ತು. ದಾಳಿ ವೇಳೆ ಯುವರಾಜ್ ಮನೆಯಲ್ಲಿ ಅಪಾರ ಪ್ರಮಾಣದ ಆಸ್ತಿ ದಾಖಲೆಗಳು, ಚಿನ್ನಾಭರಣ ಪತ್ತೆಯಾಗಿತ್ತು.

ಯುವರಾಜ್ ಮೊಬೈಲ್‌ನ ಸಿಸಿಬಿ ಪೊಲೀಸರು ಸೀಜ್ ಮಾಡಿದ್ದಾರೆ. ಯುವರಾಜ್ ಮೊಬೈಲ್​ನಲ್ಲಿ ಪ್ರಭಾವಿ ರಾಜಕಾರಣಿಗಳು ಸೇರಿದಂತೆ ರಾಜ್ಯದ ಕೆಲ ಸಚಿವರ ಮೊಬೈಲ್ ನಂಬರ್​ಗಳು ಹಾಗೂ ಆತನ ಮೊಬೈಲ್ ಗ್ಯಾಲರಿಯಲ್ಲಿ ನೂರಕ್ಕೂ ಹೆಚ್ಚು ಮಾಡೆಲ್​ಗಳ ಫೋಟೋಗಳು ಪತ್ತೆಯಾಗಿದ್ವು. ವಂಚನೆ ಕೇಸ್​ನಲ್ಲಿ ಸಿಸಿಬಿಯಿಂದ ಯುವರಾಜ್ ಅರೆಸ್ಟ್ ಆಗ್ತಿದ್ದಂತೆ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಹಾಗೂ ಸಿಸಿಬಿಯಲ್ಲಿ ಹಲವು ವಂಚನೆ ಕೇಸ್​ಗಳು ರಿಜಿಸ್ಟರ್ ಆಗಿದ್ವು.

ಯುವರಾಜ್ ಮೊಬೈಲ್​ ಪರಿಶೀಲಿಸಿದಾಗ ಸಚಿವರಾದ ವಿ.ಸೋಮಣ್ಣ, ಲಕ್ಷ್ಮಣ ಸವದಿ, ಸಿ ಪಿ ಯೋಗೇಶ್ವರ್ ಜೊತೆಗಿನ ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ವು. ಸದ್ಯ ಯುವರಾಜ್ ಮನೆಯಲ್ಲಿ ಸಚಿವರ ಹೆಸರಿನ ಲೆಟರ್ ಹೆಡ್​ಗಳು ಪತ್ತೆಯಾಗಿವೆ ಎಂಬ ಸ್ಫೋಟಕ ವಿಚಾರ ಹೊರ ಬಿದ್ದಿದೆ. ಯುವರಾಜ್ ಮಿನಿಸ್ಟರ್‌ಗಳಿಂದ ಶಿಫಾರಸು ಮಾಡಿಸ್ತೀನಿ. ನಿಮ್ಮ ಕೆಲಸಗಳನ್ನು ಮಾಡಿಸಿ ಕೊಡುತ್ತೇನೆ ಎಂದು ಹಲವರಿಂದ ಹಣ ಪೀಕಿದ್ದಾನೆ ಎಂಬ ಮಾಹಿತಿ ತನಿಖೆ ವೇಳೆ ದೊರೆತಿದೆ.

Edited By : Nagaraj Tulugeri
PublicNext

PublicNext

27/01/2021 03:50 pm

Cinque Terre

76.02 K

Cinque Terre

1

ಸಂಬಂಧಿತ ಸುದ್ದಿ