ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಪಿಎಸ್‌ಸಿ ಕಚೇರಿಯಿಂದಲೇ ಪ್ರಶ್ನೆ ಪತ್ರಿಕೆ ಸೋರಿಕೆ: 1 ಪೇಪರ್‌ಗೆ 10 ಲಕ್ಷ ಬೇಡಿಕೆ..!

ಬೆಂಗಳೂರು: ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಕರ್ನಾಟಕ ಲೋಕಸೇವಾ ಆಯೋಗದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಕೆಪಿಎಸ್‌ಸಿ ಕಚೇರಿಯಿಂದ ಶನಿವಾರ ರಾತ್ರಿಯೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ತಿಳಿದು ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮರ್ಷಿಯಲ್ ಟ್ಯಾಕ್ಸ್‌ ಇನ್ಸ್‌ಪೆಕ್ಟರ್ ಚಂದ್ರಪ್ಪ, ರಾಚಪ್ಪ ಸೇರಿ ಆರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಮೂವರು ಅಭ್ಯರ್ಥಿಗಳಿದ್ದಾರೆ ಎನ್ನಲಾಗಿದ್ದು, ಅವರ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಬಂಧಿತರಿಂದ ಪ್ರಶ್ನೆ ಪತ್ರಿಕೆಗಳು ಹಾಗೂ 24 ಲಕ್ಷ ರೂ. ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಶನಿವಾರ ರಾತ್ರಿಯೇ ಕೆಪಿಎಸ್‌ಸಿಯಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ಅಧಿಕಾರಿಯಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ಅಧಿಕಾರಿಗೆ ಇನ್ಸ್‌ಪೆಕ್ಟರ್ ಚಂದ್ರು ಸಾಥ್ ನೀಡಿದ್ದ. ಪ್ಲ್ಯಾನ್‌ನಂತೆ ಶನಿವಾರ ಸಂಜೆ ಪ್ರಶ್ನೆ ಪತ್ರಿಕೆಯನ್ನು ಉಲ್ಲಾಳದಲ್ಲಿರುವ ಫ್ಲ್ಯಾಟ್‌ಗೆ ತೆಗೆದುಕೊಂಡು ಹೋಗಿದ್ದ. ಬಳಿಕ ಚಂದ್ರು ರಾಜ್ಯದ ವಿವಿಧೆಡೆ ಇರುವ ಮಧ್ಯವರ್ತಿಗಳಿಗೆ ಹಂಚಲು ಸಂಚು ರೂಪಿಸಿದ್ದ. ಈ ಮೂಲಕ ಒಂದು ಪ್ರಶ್ನೆ ಪತ್ರಿಕೆಗೆ 10 ಲಕ್ಷ ರೂ. ಡೀಲ್ ಕುದುರಿಸಿದ್ದ ಎನ್ನುವ ವಿಚಾರ ಪ್ರಾಥಮಿಕ ತನಿಖೆ ವೇಳೆ ಲಭಿಸಿದೆ ಎನ್ನಲಾಗಿದೆ.

Edited By : Vijay Kumar
PublicNext

PublicNext

24/01/2021 09:42 am

Cinque Terre

89.5 K

Cinque Terre

5