ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ದನಗಳಿಗೆ ನೀರು ಕುಡಿಸಲು ಹೋಗಿ ಜೀವ ಬಿಟ್ಟ ನರ್ಸಿಂಗ್ ವಿದ್ಯಾರ್ಥಿನಿ!

ಶಿವಮೊಗ್ಗ: ದನಗಳಿಗೆ ನೀರು ಕುಡಿಸಲು ತೆರಳಿದ್ದ ಯುವತಿಯೊಬ್ಬಳು ಆಯತಪ್ಪಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಸಾಗರ ತಾಲೂಕಿನಲ್ಲಿ ಗುರುವಾರ ನಡೆದಿದೆ.

ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮದ ಅಂಜಲಿ (19) ಮೃತಪಟ್ಟ ಯುವತಿ. ಅಂಜಲಿ ಸಾಗರದ ಉಳ್ಳೂರಿನಲ್ಲಿ ಬಿಎಸ್ಸಿ ನರ್ಸಿಂಗ್ ಓದುತ್ತಿದ್ದರು. ಇಂದು ಮನೆಯಲ್ಲಿದ್ದ ಸಮಯದಲ್ಲಿ ದನಗಳಿಗೆ ನೀರು ಕುಡಿಸಲು ಬಾವಿಗೆ ನೀರು ತರಲು ಹೋಗಿದ್ದರು. ಈ ವೇಳೆ ಆಯತಪ್ಪಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ. ನೀರಿಗೆ ಹೋಗಿದ್ದ ಅಂಜಲಿ ಬಾರದಿದ್ದನ್ನು ಗಮನಿಸಿದ ಮನೆಯವರು ಬಾವಿಯ ಬಳಿ ಹೋದಾಗ ಪ್ರಕರಣ ಬೆಳಕಿಗೆ‌ ಬಂದಿದೆ.

Edited By : Vijay Kumar
PublicNext

PublicNext

21/01/2021 05:02 pm

Cinque Terre

60.09 K

Cinque Terre

6

ಸಂಬಂಧಿತ ಸುದ್ದಿ