ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಸಾಜ್ ಪಾರ್ಲರ್ ಗೆ ಹೋಗೋ ಮುನ್ನ ಹುಷಾರ್…

ಬೆಂಗಳೂರು : ಆಧುನಿಕ ಜಗತ್ತಿನಲ್ಲಿ ಎಲ್ಲವೂ ಸಲೀಸಾಗಿ ಕೈಗೆ ಸಿಕ್ಕು ಬಿಡತ್ತೇ ಇದನ್ನೇ ದಾಳವಾಗಸಿಕೊಳ್ಳುವ ಹಲವರು ವಂಚಿಸಲೆಂದೇ ಹೊಂಚುಹಾಕಿ ಕಾಯುತ್ತಿರುತ್ತಾರೆ ಹುಷಾರ್..

ಹೌದು ಆನ್ ಲೈನ್ ನಲ್ಲಿ ಮಸಾಜ್ ಪಾರ್ಲರ್ ಗಳನ್ನ ಸರ್ಚ್ ಮಾಡೋ ಮುನ್ನಾ ಹುಷಾರ್.. ಕಾಲ್ ಮಾಡಿದರೆ ಮುಗಿತು ನಿಮ್ಮ ಕಥೆ.

ಮಸಾಜ್ ಮಾಡೋ ನೆಪದಲ್ಲಿ ಅಶ್ಲೀಲ ಪೊಟೋ ಕ್ಲಿಕ್ಕಿಸಿಕೊಂಡು ಹಣ ವಸೂಲಿ ಮಾಡುವ ಗ್ಯಾಂಗ್ ರಾಜಧಾನಿಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತವೆ.

ಕಳೆದ ವಾರ ಆನ್ ಲೈನ್ ನಲ್ಲಿ ಮಸಾಜ್ ಪಾರ್ಲರನ್ನ ಸಂಪರ್ಕಿಸಿದ್ದ ಕೆ.ಎಸ್ ಲೇಔಟ್ ನ ಯುವಕ ಜಾಲಕ್ಕೆ ಸಿಕ್ಕಿ ಹಾಕಿಕೊಂಡಿದ್ದ.

ಈ ವೇಳೆ ಜಯನಗರದ ಬಳಿ ಬರುವಂತೆ 38 ವರ್ಷದ ವ್ಯಕ್ತಿಗೆ ಆರೋಪಿಗಳು ತಿಳಿಸಿದ್ದಾರೆ.

ಕಾರ್ ನಲ್ಲಿ ಹುಡುಗಿಯನ್ನ ಕೂರಿಸಿ ಮಸಾಜ್ ಮಾಡ್ತೀವಿ ಅಂತ ಮೊದಲಿಗೆ 15 ಸಾವಿರ ಹಣ ಪಡೆದಿದ್ದಾರೆ. ನಂತರ ಮನೆಗೆ ಹೋಗೋಣ ಬನ್ನಿ ಅಲ್ಲೆ ಮಸಾಜ್ ಮಾಡ್ತೀವಿ ಅಂತ ಯುವಕನನ್ನ ಕರೆದೊಯ್ದಿದ್ದಾರೆ. ಮಸಾಜ್ ಮಾಡೋ ನೆಪದಲ್ಲಿ ಯುವತಿ ಜೊತೆಗಿನ ಯುವಕನ ಅಶ್ಲೀನ ಪೊಟೊಗಳನ್ನ ಯುವಕನ ಗಮನಕ್ಕೆ ಬರದಂತೆ ಕ್ಲಿಕ್ಕಿಸಿಕೊಂಡಿದ್ದಾಳೆ.

ನಂತರ ಅಶ್ಲೀಲ ಪೊಟೊಗಳನ್ನ ತೋರಿಸಿ 4 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಮಾನಕ್ಕೆ ಅಂಜಿದ ಯುವಕ 1 ಲಕ್ಷ ಹಣ ನೀಡಿ ಬಂದಿದ್ದಾನೆ. ಯುವಕನ ಬಳಿಯಿದ್ದ ಚಿನ್ನದ ಚೈನ್ ಉಂಗುರವನ್ನ ಗ್ಯಾಂಗ್ ಕಿತ್ತುಕೊಂಡಿದೆ. ಮೋಸ ಹೋದ ಯುವಕ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದು ಗ್ಯಾಂಗ್ ಪತ್ತೆಗೆ ಶೋಧ ನಡೆದಿದೆ.

Edited By : Nirmala Aralikatti
PublicNext

PublicNext

20/01/2021 09:50 pm

Cinque Terre

118.03 K

Cinque Terre

4