ಯಾದಗಿರಿ: ಮಚ್ಚಿನಿಂದ ಕೊಚ್ಚಿ ಚಿನ್ನದ ವ್ಯಾಪಾರಿಯ ಮಗನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಹಾಗೂ ಕೆಲಸಗಾರನನ್ನು ಅಪಹರಿಸಿಕೊಂಡು ಪರಾರಿಯಾಗಿದ್ದಾರೆ. ಈ ಘಟನೆ ಜಿಲ್ಲೆಯ ಹುಣಸಗಿ ಪಟ್ಟಣದ ಬಸ್ ನಿಲ್ದಾಣದ ಬಳಿ ನಡೆದಿದೆ.
ಚಿನ್ನದ ವ್ಯಾಪಾರಿಯೊಬ್ಬರ ಮಗನಾದ ನರೇಂದ್ರ ಮತ್ತು ಕೆಲಸಗಾರ ಕಿಶೋರ್ ರೂಮಿನಲ್ಲಿ ಇದ್ದಾಗ ಘಟನೆ ನಡೆದಿದೆ. ಚಿನ್ನದ ಆಸೆಗೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಈ ಪ್ರಕರಣ ಹುಣಸಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
PublicNext
14/01/2021 02:04 pm