ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಟೋ ಚಾಲಕನ ಕ್ರೌರ್ಯ : ವೃದ್ಧನ ಕೊಲೆಗೆ ಯತ್ನಸಿದ ದೃಶ್ಯ ವೈರಲ್

ಮೈಸೂರು: ರಸ್ತೆ ಬದಿಯಲ್ಲಿ ನಿಂತಿದ್ದ ವೃದ್ಧನೋರ್ವನನ್ನು ಕೊಲೆ ಮಾಡಲು ಮುಂದಾದ ಆಟೋ ಚಾಲಕನ ಕ್ರೌರ್ಯತೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹೌದು ಮೈಸೂರಿನಲ್ಲಿ ನಡೆದಿರುವ ಈ ಭೀಕರ ದೃಶ್ಯ ನೋಡುಗರ ಎದೆ ಝಲ್ ಎನ್ನುವಂತಿದೆ.

ನೋಡು ನೋಡುತ್ತಿದ್ದಂತೆ ನಿರ್ಗತಿಕ ವ್ಯಕ್ತಿಯ ಮೇಲೆ ಚಾಲಕನೊಬ್ಬ ಆಟೋ ಹತ್ತಿಸಿ ಕೊಲೆಗೈಯಲು ಯತ್ನಿಸಿದ್ದಾನೆ. ನಗರದ ಗಾಂಧಿನಗರದ 4ನೇ ಕ್ರಾಸ್ ನಲ್ಲಿ ಈ ಅಮಾನವೀಯ ಘಟನೆ ನಡೆದಿದೆ.

ರಸ್ತೆ ತಿರುವಿನಲ್ಲಿ ನಿಂತಿದ್ದ ನಿರ್ಗತಿಕನ ಮೇಲೆ ಆಟೋ ಹತ್ತಿಸಿದ ಚಾಲಕ ಮತ್ತೆ ಮುಂದೆ ಹೋಗಿ ಯೂಟರ್ನ್ ತೆಗೆದುಕೊಂಡು ಬಂದು ಮತ್ತೆ ಆತನ ಮೇಲೆ ಆಟೋ ಹತ್ತಿಸಿದ್ದಾನೆ.

ಹಿರಿಯ ಜೀವದ ಮೇಲೆ ಆಟೋ ಹತ್ತಿದ್ದರಿಂದ ಗಂಭೀವಾಗಿ ಗಾಯಗೊಂಡಿದ್ದರು. ರಸ್ತೆ ಬದಿ ವಿಲವಿಲನೆ ಒದ್ದಾಡುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ಕೆಆರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಪ್ರಕರಣ ಸಂಬಂಧ ದೂರು ದಾಖಲಾಗಿದ್ದು ಆಟೋ ಚಾಲಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Edited By : Nirmala Aralikatti
PublicNext

PublicNext

12/01/2021 05:15 pm

Cinque Terre

165.7 K

Cinque Terre

8

ಸಂಬಂಧಿತ ಸುದ್ದಿ