ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ: ಮೀಟರ್ ಬಡ್ಡಿ ದಂಧೆಗೆ ಕಂಗೆಟ್ಟು ಆತ್ಮಹತ್ಯೆಗೆ ಶರಣಾದ ಯುವಕ

ಚಿಕ್ಕಬಳ್ಳಾಪುರ: ಮೀಟರ್​ ದಂಧೆಗೆ ಬೇಸತ್ತ ಯುವಕನೊಬ್ಬ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಸುಲ್ತಾನಪೇಟೆಯಲ್ಲಿ ನಡೆದಿದೆ.

ನಂದಿ ಗ್ರಾಮದ ಮಾರಮ್ಮ ಮತ್ತು ಸುಲ್ತಾನಪೇಟೆಯ ಸಫಲಮ್ಮ ದೇವಿಯ ದೇವಾಲಯದ ಪೂಜಾರಿ ರಾಘವೇಂದ್ರ ಕೆ.ವಿ. ಆತ್ಮಹತ್ಯೆಗೆ ಶರಣಾದ ಯುವಕ. ರಾಘವೇಂದ್ರ ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿದ್ದು, ಇದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

''ನಾನು 2015-16ರಲ್ಲಿ ಅಕ್ಷತಾ ಕೋ ಆಪರೇಟಿವ್ ಲಿಮಿಟೆಡ್‌ ಎಂಬ ಖಾಸಗಿ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು ಸಾರ್ವಜನಿಕರಿಂದ ಫೈನಾನ್ಸ್ ಕಂಪನಿಗೆ ಹಣ ಕಟ್ಟಿಸಿದ್ದೆ. ಆದರೆ ಫೈನಾನ್ಸ್ ಕಂಪನಿ ಮುಚ್ಚಿದಾಗ ಹಣ ಕಟ್ಟಿದವರಿಗೆ ಹಣ ವಾಪಸ್ಸು ನೀಡಲು ಹಲವರ ಬಳಿ 8 ಲಕ್ಷ ಸಾಲ ಮಾಡಿದ್ದೆ. ಸಾಲ ನೀಡಿದ್ದ ಸಾಲಗಾರರು ಬಡ್ಡಿಗೆ ಬಡ್ಡಿ ಸೇರಿಸಿ ಮೀಟರ್ ಬಡ್ಡಿ ಲೆಕ್ಕದಲ್ಲಿ 1ರಿಂದ 2 ಕೋಟಿ ನೀಡಬೇಕೆಂದು ಕಿರುಕುಳ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವೆ'' ಎಂದು ರಾಘವೇಂದ್ರ ಸೆಲ್ಫಿ ವಿಡಿಯೋದಲ್ಲಿ ತಿಳಿಸಿದ್ದಾನೆ.

ರಾಘವೇಂದ್ರ ಕಳೆದ ಮಂಗಳವಾರ ಫ್ಯಾನ್​​ಗೆ ತನ್ನ ಪಂಚೆಯಿಂದ ನೇಣಿಗೆ ಹಾಕಿಕೊಂಡಿದ್ದ. ಆದರೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡದೆ ಅಂತ್ಯ ಸಂಸ್ಕಾರ ನಡೆದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಶುಕ್ರವಾರದಿಂದ ರಾಘವೇಂದ್ರ ಸೆಲ್ಪಿ ಸೂಸೈಡ್ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

Edited By : Vijay Kumar
PublicNext

PublicNext

09/01/2021 04:04 pm

Cinque Terre

69.63 K

Cinque Terre

3

ಸಂಬಂಧಿತ ಸುದ್ದಿ