ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಅಪಹರಿಸಿ ಗ್ಯಾಂಗ್ ರೇಪ್: ಕೊಲೆಗೆ ಯತ್ನಿಸಿದ ಕಿರಾತಕರು

ಬಿಹಾರ: 10ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಐವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿ, ಕೊಲೆ ಮಾಡಲು ಯತ್ನಿಸಿರುವ ಘಟನೆ ಬಿಹಾರದ ಮುಜಾಫರ್​ಪುರ ಜಿಲ್ಲೆಯಲ್ಲಿ ನಡೆದಿದೆ.

ಇದೇ ಜನವರಿ 4ರಂದು ಬಾಲಕಿ ಕೋಚಿಂಗ್​ ಕ್ಲಾಸ್​ಗೆ ತೆರಳಿದ್ದ ವೇಳೆ ಆಕೆಯನ್ನು ಅಪಹರಿಸಿದ್ದ ಆರೋಪಿಗಳು ಅಜ್ಞಾತ ಸ್ಥಳಕ್ಕೆ ಹೊತ್ತೊಯ್ದು ಕೃತ್ಯ ಎಸಗಿದ್ದಾರೆ. ನಂತರ ಸಂತ್ರಸ್ತೆಯನ್ನು ಕೊಲ್ಲಲು ಮುಂದಾಗಿದ್ದು ಆಕೆ ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ.

ಸಂತ್ರಸ್ತೆಯ ತಂದೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಓರ್ವ ಆರೋಪಿಯಾಗಿರುವ ಆಕೆಯ ಸಹಪಾಠಿಯನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

Edited By : Nagaraj Tulugeri
PublicNext

PublicNext

07/01/2021 05:58 pm

Cinque Terre

71.34 K

Cinque Terre

0

ಸಂಬಂಧಿತ ಸುದ್ದಿ