ಬಳ್ಳಾರಿ: ಸಾಲದಿಂದ ಕಂಗೆಟ್ಟ ದಂಪತಿ ತಮ್ಮ ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಲೆಗೈದು ಆತ್ಮಹತ್ಯೆಗೆ ಶರಣಾದ ಘಟನೆ ಹೊಸಪೇಟೆಯ ಗಾದಿಗನೂರು ಗ್ರಾಮದಲ್ಲಿ ನಡೆದಿದೆ.
ಗಾದಿಗನೂರು ಗ್ರಾಮದ ನಿವಾಸಿ ನಂಜುಂಡೇಶ್ವರ (32) ಹಾಗೂ ಪತ್ನಿ ಪಾರ್ವತಿ (27) ಆತ್ಮಹತ್ಯೆ ಶರಣಾದ ದಂಪತಿ. ನಂಜುಂಡೇಶ್ವರ ಜಿಂದಾಲ್ ಕಂಪನಿಯ ನೌಕರನಾಗಿದ್ದ. ಮೈತುಂಬಾ ಸಾಲ ಮಾಡಿಕೊಂಡಿದ್ದ ದಂಪತಿ ತೀರಿಸಲಾಗದೆ ನೊಂದಿದ್ದರು. ಹೀಗಾಗಿ ದಂಪತಿಯು ಡೆತ್ ನೋಟ್ ಬರೆದಿಟ್ಟು, ಮೊದಲು ಮಕ್ಕಳಾದ ಗೌತಮಿ(3) ಹಾಗೂ ಸ್ವರೂಪ(2) ಅವರಿಗೆ ವಿಷವುಣಿಸಿ ಕೊಂದಿದ್ದಾರೆ. ಬಳಿಕ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಗಾದಿಗನೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
06/01/2021 05:39 pm